ಮದೀನಾಕ್ಕೆ ತೆರಳುವಾಗ ಕಾರು ಅಪಘಾತ ಮುಂಡಗೋಡಿನ ಮೂವರು ಸಾವು

Mundgod accident
Published on

ಮುಂಡಗೋಡ:ಹಜ್ ಯಾತ್ರೆಗೆ ತೆರಳಿದ ಪಟ್ಟಣದ ಕುಟುಂಬದ ಮೂವರು ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮುಂಡಗೋಡಿನ ರೋಣ್ಸ್ ಮೆಡಿಕಲ್ ನ ಮಾಲೀಕ ಫಯಾಜ್ ಅಮಹದ್ ರೋಣ್, ಅವರ ಪತ್ನಿ ಆಫೀನಾ ಬಾನು ಹಾಗೂ ಅಣ್ಣನ ಮಗ ಅಯಾನ್ ಮೃತರು. ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೆಕ್ಕಾ ದರ್ಶನ ಮುಗಿಸಿ ಕಾರಿನಲ್ಲಿ ಮದೀನಾಕ್ಕೆ ಹೊರಟ ವೇಳೆ ಟಯರ್ ಸ್ಪೋಟಗೊಂಡು, ಕಾರು ಲ್ಟಿಯಾಗಿತ್ತು ಎನ್ನಲಾಗಿದೆ. ಗಾಯಾಳುಗಳನ್ನು ಅಲ್ಲಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತ ದೇಹಗಳನ್ನು ಸ್ವದೇಶಕ್ಕೆ ತರಿಸಿಕೊಳ್ಳುವ ಬಗ್ಗೆ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಲಾಗುತ್ತಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net