ಭೀಕರ ಅಪಘಾತ, ಬಿಜೆಪಿ ಮುಖಂಡನ ಕಾಲು ತುಂಡು: ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕ, ಒಟ್ಟು ಐವರಿಗೆ ಗಾಯ..

Accident
Published on

ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಭೀಕರವಾಗಿ ಅಪಘಾತಕ್ಕೀಡಾಗಿದ್ದು, ಬಿಜೆಪಿ ಮುಖಂಡ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿಯ ಹೊರವಲಯದ ಶಹಬಾದ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಶಹಬಾದ ರಸ್ತೆಯ ಕೇಂಬ್ರಿಡ್ಜ್​ ಶಾಲೆಯ ಬಳಿ ಈ ಅಪಘಾತವಾಗಿದ್ದು, ಬಿಜೆಪಿ ಗ್ರಾಮಾಂತರ ಯುವ ಮೋರ್ಚಾ ಮುಖಂಡ ವೀರೇಂದ್ರ ಪಾಟೀಲ್ ರಾಯಕೋಡ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಐವರೂ ಕಲಬುರಗಿಯ ಜಗತ್ ಬಡಾವಣೆಯ ನಿವಾಸಿಗಳು.

ವೀರೇಂದ್ರ ಪಾಟೀಲ್ ಕಾಲು ತುಂಡಾಗಿದ್ದರೆ, ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ಸಂಚಾರಿ ಠಾಣೆ 2ರಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net