ಕಾರು ಅಪಘಾತ, ಅಗ್ನಿಶಾಮಕ ದಳದ ಫೈರ್‌ಮನ್ ಸಾವು

28 smg arun
Published on

ಶಿವಮೊಗ್ಗ: ಅರಸಿಕೆರೆ-ಕಡೂರು ನಡುವೆ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಕಾರು ಅಪಘಾತದಲ್ಲಿ ಶಿವಮೊಗ್ಗ ಅಗ್ನಿಶಾಮಕ ದಳದ ಫೈರ್‌ಮನ್ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಗ್ನಿಶಾಮಕ ದಳದ ಫೈರ್‌ಮನ್ ಎನ್.ಅರುಣ್(39) ಮೃತಪಟ್ಟಿದ್ದು ಕಾರು ಚಾಲಕ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರುಣ್, ಸತೀಶ್, ಅರುಣ್ ಅವರ ಸಹೋದರ ಮತ್ತು ಅವರ ಪುತ್ರ ಹಾಸನ ಸಮೀಪ ದೇವರ ಕಾರ್ಯಕ್ಕೆ ತೆರಳಿ ವಾಪಸ್ ಬರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡಿದಿತ್ತು.

ಅಪಘಾತದಲ್ಲಿ ಅರುಣ್ ಸ್ಥಳದಲ್ಲೇ ಮೃತಪಟ್ಟರೆ, ಅಗ್ನಿಶಾಮಕ ದಳದಲ್ಲಿ ಫೈರ್ ಇಂಜಿನ್ ವಾಹನದ ಚಾಲಕರೂ ಆಗಿರುವ ಸತೀಶ್ ಕಾಲು ಮುರಿದಿದ್ದು ಮೂರು ತಿಂಗಳು ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಅರುಣ್ ಅವರ ಸಹೋದರ ಮತ್ತು ಅವರ ಪುತ್ರ ಕಾರಿನಲ್ಲಿದ್ದು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net