

ವಾಡಿ: ಲಾಡ್ಲಾಪುರ-ಹಲಕರ್ಟಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ೧೫೦ರಲ್ಲಿ ಭಾನುವಾರ ಕಾರೊಂದಕ್ಕೆ ಬೆಂಕಿ ತಗುಲಿ ಮೂವರು ಗಾಯಗೊಂಡಿದ್ದಾರೆ. ಯಾದಗಿರಿ ಮೂಲದ ಸೋಹೇಬï ಸಗರ, ಯುಸೂಫ್, ಅಮಾನ್ ಗಾಯಗೊಂಡಿದ್ದು, ವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಇನ್ನುಳಿದ ಶೇಖ್ ಮೊಹಮ್ಮದ್ ಇಬ್ರಾಹಿಂ, ಅನಸ್, ನಾತಿಕ್ ಅಪಾಯದಿಂದ ಪಾರಾಗಿದ್ದಾರೆ. ಯಾದಗಿರಿಯಿಂದ ಓಮ್ನಿಯಲ್ಲಿ ಆರು ಜನ ಕಲಬುರಗಿಗೆ ಬರುತ್ತಿದ್ದರು. ಮಧ್ಯಾಹ್ನ ಟೈರ್ ಬ್ಲಾಸ್ಟ್ ಆಗಿ ರಸ್ತೆಗೆ ಉರುಳಿದ್ದು, ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಲ್ಲರೂ ಕಾರಿನಿಂದ ಇಳಿದಿದ್ದಾರೆ. ಪಿಎಸ್‌ಐ ತಿರುಮಲೇಶ ಕುಂಬಾರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.