

ಬೈಂದೂರು: ದಾವಣಗೆರೆಯಲ್ಲಿ ಸೋಮವಾರ ಮುಂಜಾನೆ ಕಂಟೈನರ್ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಕುಂದಾಪುರದ ಛಾಯಾಗ್ರಾಹಕ ಹೇರೂರು ಅಶೋಕಕುಮಾರ್ ಶೆಟ್ಟಿ (58) ಹಾಗೂ ಅವರ ಪುತ್ರ ಪನ್ನಗ(24) ಗಂಭೀರ ಗಾಯಗೊಂಡಿದ್ದಾರೆ.
ಅಶೋಕಕುಮಾರ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ, ಬೆನ್ನುಹುರಿ ಘಾಸಿಗೊಂಡಿರುವ ಪನ್ನಗ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶೋಕ್ ಅವರು ಪುತ್ರ ಪನ್ನಗ ಹಾಗೂ ಕುಮಾರ್ ಎಂಬವರ ಜತೆ ಕಾರಿನಲ್ಲಿ ಮದುವೆ ಕಾರ್ಯಕ್ರಮದ ಛಾಯಾಗ್ರಹಣಕ್ಕೆ ತೆರಳಿದ್ದರು. ಭಾನುವಾರ ಕಾರ್ಯಕ್ರಮ ಮುಗಿಸಿ ರಾತ್ರಿ ವಾಪಸಾಗುತ್ತಿದ್ದರು. ಪನ್ನಗ ಕಾರು ಚಲಾಯಿಸುತ್ತಿದ್ದು, ಅಪಘಾತಕ್ಕೀಡಾದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹಿಂಬದಿಯಲ್ಲಿ ಕುಳಿತಿದ್ದ ಕುಮಾರ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಅಶೋಕಕುಮಾರ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ, ಬೆನ್ನುಹುರಿ ಘಾಸಿಗೊಂಡಿರುವ ಪನ್ನಗ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕಕುಮಾರ ಶೆಟ್ಟಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸಿದ್ದು, ಒಂದು ಅವಧಿಗೆ ಅದರ ಅಧ್ಯಕ್ಷರಾಗಿದ್ದರು. ಸುದ್ದಿ ತಿಳಿದ ತಕ್ಷಣ ಜಿಲ್ಲೆಯ ಹಲವು ಛಾಯಾಗ್ರಾಹಕರು ತುಮಕೂರಿಗೆ ತೆರಳಿದ್ದಾರೆ.