ಕಾರು ಪಲ್ಟಿಯಾಗಿ ಮಗು ಸಾವು

car
Published on

ಉಡುಪಿ: ಅಂಬಲಪಾಡಿ ಮಹೀಂದ್ರ ಶೋರೂಂ ಮುಂಭಾಗ ಕಾರು ಪಲ್ಟಿಯಾಗಿದ್ದು, ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ.

ಶನಿವಾರ ಬೆಳಗ್ಗೆ 7.30ಕ್ಕೆ ಮಂಗಳೂರಿನಿಂದ-ಶಿವಮೊಗ್ಗ ಶಿಕಾರಿಪುರಕ್ಕೆ ಹೋಗುತ್ತಿದ್ದ ಸಂದರ್ಭ ಅಂಬಲಪಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಕಾರು ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿ ಇನ್ನೊಂದು ರಸ್ತೆಯ ಅಂಚಿಗೆ ಬಿದ್ದಿದೆ. ಕಾರಿನಲ್ಲಿದ್ದ ಎರಡೂವರೆ ವರ್ಷದ ಹೆಣ್ಣು ಮಗು ಮನ್ನ ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದೆ. ಸಾವನ್ನಪ್ಪಿದ ಮಗು, ಕಾರು ಚಲಾಯಿಸುತ್ತಿದ್ದ ತಜ್ವೀದ್ ಎಂಬುವರ ಪುತ್ರಿ.

ಮಗುವಿನ ತಾಯಿ ರಿಜ್ವ್ವಾನ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಮಂಗಳೂರು ಕುದ್ರೋಳಿ ನಿವಾಸಿ ತಜ್ವೀದ್ ಅವರು ಕ್ರೆಟಾ ಕಾರಿನಲ್ಲಿ ತನ್ನ ಪತ್ನಿ ಮಕ್ಕಳೊಂದಿಗೆ ಮಂಗಳೂರಿನಿಂದ ಹೊರಟು ಕಾಪು ಮುಳೂರಿನಲ್ಲಿ ಇನ್ನೊಂದು ಕುಟುಂಬದ ಸದಸ್ಯರನ್ನು ಕಾರಿನಲ್ಲಿ ಕೂರಿಸಿಕೊಂಡು ಶಿಕಾರಿಪುರಕ್ಕೆ ಹೋಗುತ್ತಿದ್ದರು. ಕಾರಿನಲ್ಲಿ ಐವರು ಮಕ್ಕಳು ಸಹಿತ, 4 ಮಂದಿ ದೊಡ್ಡವರಿದ್ದರು. ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net