ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾವು; ಯಾದಗಿರಿ ಜಿಲ್ಲೆ ಗೌಡಗೇರಾ ರಸ್ತೆಯಲ್ಲಿ ಅಪಘಾತ

accident
Published on

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಜಿಲ್ಲೆಯ ಕೆಂಭಾವಿ ಸಮೀಪದ ಗೌಡಗೇರಾ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ವಿಶ್ವನಾಥರಡ್ಡಿ (25), ಶರಣಪ್ಪ ಓಂಕಾರಪ್ಪ (26), ಶರಣು ಷಣ್ಮುಖಪ್ಪ (22), ತಿರುಪತಿ (25) ಮೃತರು. ಇವರು ನಗನೂರು ಗ್ರಾಮದವರು ಎಂದು ತಿಳದಿ ಬಂದಿದೆ.

ಅಪಘಾತದಲ್ಲಿ ಬಾಲಪ್ಪ ಗೌಡ, ಮಲ್ಲಣ್ಣ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕಲಬುರಗಿಗೆ ಕಳಿಸಲಾಗಿದೆ. ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net