ಕಾರು ಪಲ್ಟಿಯಾಗಿ ಮಹಿಳೆಗೆ ಗಾಯ

New Project (28)
Published on

ಪುತ್ತೂರು ಗ್ರಾಮಾಂತರ: ಮಾಡ್ನೂರು ಗ್ರಾಮದ ಅಮ್ಚಿನಡ್ಕ ಸಮೀಪದ ಕುಡ್ಪಿನಡ್ಕ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಹಾರೆಕೆರೆ ನಾರಾಯಣ ಭಟ್ ಎಂಬುವರ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಗುರುವಾರ ಗಾಯಗೊಂಡಿದ್ದಾರೆ. ನಾರಾಯಣ ಭಟ್ ಅಪಾಯದಿಂದ ಪಾರಾಗಿದ್ದು, ಪತ್ನಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net