ನಿಲುವಾಗಿಲು ಗ್ರಾಮದಲ್ಲಿ ಚಲಿಸುತ್ತಿದ್ದ ಕಾರು ಪಲ್ಟಿ

27ark2
Published on

ಅರಕಲಗೂಡು : ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಮಂಗಳವಾರ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಜಖಂಗೊಂಡಿದೆ.

ಹಾಸನ- ಪಿರಿಯಾಪಟ್ಟಣ ಮಾರ್ಗದ ಹೆದ್ದಾರಿಯಲ್ಲಿ ರಾಮನಾಥಪುರ ಕಡೆಯಿಂದ ಅರಕಲಗೂಡು ಕಡೆಗೆ ತೆರಳುತ್ತಿದ್ದ ಕಾರು ಟೋಲ್ ಬಿಟ್ಟು ನಿಲುವಾಗಿಲು ಗ್ರಾಮದಲ್ಲಿ ಚಲಿಸುತ್ತಿದ್ದಾಗ ಬ್ರೇಕ್ ಜಾಮ್ ಆಗಿ ವಿರುದ್ಧ ದಿಕ್ಕಿಗೆ ಸಾಗಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಇಬ್ಬರು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net