ಕರಡಿ ಪ್ರತ್ಯಕ್ಷ

mkg
Published on

ಸಾಸ್ವೆಹಳ್ಳಿ: ಕಳೆದ ಮೂರ‌್ನಾಲ್ಕು ದಿನಗಳಿಂದ ಹೋಬಳಿಯ ಕುಳಗಟ್ಟೆ, ಹೊಸಹಳ್ಳಿ, ಲಿಂಗಾಪುರ, ಹೊಸಹಳ್ಳಿ 1ನೇ ಕ್ಯಾಂಪ್ ಗ್ರಾಮಗಳ ಸುತ್ತ ಕರಡಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ರಾತ್ರಿ ವೇಳೆ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರು ಹೊರಗಡೆ ತಿರುಗಾಡಲು ಭಯ ಪಡುವಂತಾಗಿದೆ. ಹೊಲಗದ್ದೆಗೆ ಹೋಗಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ರಾತ್ರಿ ಮನೆ ಮುಂದೆ ಹಾದುಹೋಗುವ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕರಡಿಯಿಂದ ಅವಘಡ ಸಂಭವಿಸುವ ಮುನ್ನ ಸ್ಥಳಾಂತರ ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net