ಅಪರಿಚಿತ ವ್ಯಕ್ತಿ ಕೊಲೆಗೈದು ಪರಾರಿಯಾಗಿದ್ದವನ ಸೆರೆ

kunigal crime
Published on

ಕುಣಿಗಲ್: ಎಡಿಯೂರು ರೈಲ್ವೆ ಸ್ಟೇಷನ್ ಬಳಿ ಅಪರಿಚಿತ ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಅಮತೂರು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಕುಣಿಗಲ್ ತಾಲೂಕು ಎಡಿಯೂರು ಹೋಬಳಿ ಕೋಡಿಪಾಳ್ಯದ ಹಾಲಿ ಬೆಂಗಳೂರಿನ ನಿವಾಸಿ ದೇವರಾಜು ಅಲಿಯಾಸ್ ತಿಮ್ಮ (34) ಬಂಧಿತ. ಜೂ.10ರಂದು ಎಡಿಯೂರು ರೈಲ್ವೆ ನಿಲ್ದಾಣದ ಬಳಿ ಸುಮಾರು 60 ವರ್ಷದ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು.

ಈ ಸಂಬಂಧ ಅಮತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದರು, ಎಸ್ಪಿ ಡಾ.ಕೆ.ವಂಶಿಕಷ್ಣ, ಅಡಿಷನಲ್ ಎಸ್ಪಿ ಟಿ.ಜೆ.ಉದೇಶ್, ಡಿವೈಎಸ್‌ಪಿ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಕೆ.ಇ.ನಿರಂಜನ್‌ಕುಮಾರ್, ಪಿಎಸ್‌ಐ ಬಿ.ಪಿ.ಮಂಜು, ನೇತತ್ವದ ತಂಡ ಆರೋಪಿಯನ್ನು ಬೆಂಗಳೂರಿನ ಕಲಾಸಿಪಾಳ್ಯ ಹೂ ಮಾರುಕಟ್ಟೆ ಬಳಿ ಗುರುವಾರ ಬಂಧಿಸಿದೆ.

ಘಟನೆ ವಿವರ: ಕೊಲೆಯಾದ ವ್ಯಕ್ತಿ ಅಲೆಮಾರಿಯಾಗಿದ್ದು, ಊರು ಊರುಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ದೇವರಾಜ, ಲಾಕ್‌ಡೌನ್ ಕಾರಣಕ್ಕೆ ಕೋಡಿಪಾಳ್ಯಕ್ಕೆ ಬಂದು ನೆಲೆಸಿದ್ದ. ಈ ವೇಳೆ ಕೊಲೆಯಾದ ವ್ಯಕ್ತಿ ಹಾಗೂ ದೇವರಾಜು ನಡುವೆ ಸ್ನೇಹ ಬೆಳೆದು ಒಂದೇ ಕಡೆ ಕೆಲಸ ಮಾಡುತ್ತಿದ್ದರು, ಜೂ.10ರಂದು ಇಬ್ಬರು ಕೆಲಸ ಮುಗಿಸಿಕೊಂಡು ರೈಲು ನಿಲ್ದಾಣದ ಬಳಿ ಕುಡಿದು ಊಟ ಮಾಡಿ ಕುಳಿತಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅಪರಿಚಿತ ವ್ಯಕ್ತಿಯ ಕೊಲೆ ಮಾಡಿ ಪರಾರಿಯಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net