ಸೇವೆ ತ್ಯಾಗ ನಮ್ಮ ಉಸಿರಾಗಬೇಕು

web 2
Published on

ಧಾರವಾಡ: ಸೇವೆ, ಸಮರ್ಪಣೆ, ತ್ಯಾಗ ನಮ್ಮ ಉಸಿರಾಗಬೇಕು. ಅಂದಾಗ ಮಾತ್ರ ದೇಶ ಉಳಿದು ಬೆಳೆಯುತ್ತದೆ ಎಂದು ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕ್ಯಾಪ್ಟನ್ ಬಿ.ಸಿ. ಕಲ್ಮಠ ಸ್ಮಾರಕ ದತ್ತಿ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ರಿಟೀಷರ ಒಡೆದು ಆಳುವ ನೀತಿಯಿಂದ ಭಾರತಕ್ಕೆ ಬಹಳ ಧಕ್ಕೆಯಾಯಿತು. ಆಗಿನ ಸಂದರ್ಭದಲ್ಲಿ ಜನ ಸಾವಿಗೆ ಕಾಯುತ್ತಿರಲಿಲ್ಲ. ದೇಶಕ್ಕಾಗಿ ಸಾವಿಗೆ ಎದೆಯೊಡ್ಡುತ್ತಿದ್ದರು. ಆದ್ದರಿಂದ ಹೋರಾಟಗಾರರ ಬಲಿದಾನದಿಂದ ಬಂದ ಸ್ವಾತಂತ್ರ‍್ಯದ ಘನತೆಯನ್ನು ಕಾಪಾಡಬೇಕು ಎಂದರು.
ಸ್ವಾತAತ್ರ‍್ಯ ಹೋರಾಟ ಸಂದರ್ಭದಲ್ಲಿ ಖಿಲಾಫತ್ ಚಳವಳಿಯ ಅಂಗವಾಗಿ ಹೋರಾಡಿ ಮಡಿದ ಧಾರವಾಡದ ವೀರರು' ವಿಷಯ ಕುರಿತು ಸಾಮಾಜಿಕ ಕಾರ್ಯಕರ್ತ ಉದಯ ಯಂಡಿಗೇರಿ ಮಾತನಾಡಿ, ಖಿಲಾಫತ್ ಚಳವಳಿಯಲ್ಲಿ ಭಾಗವಹಿಸಿ ಹುತಾತ್ಮರಾದವರಲ್ಲಿ ಧಾರವಾಡದ ಮಲೀಕಸಾಬ ಬಿನ್ ಮರ್ದಾನಸಾಬ, ಗೌಸುಸಾಬ ಬಿನ್ ಖಾದರಸಾಬ, ಅಬ್ದುಲ್ ಗಫಾರ ಚೌಕಧಾಯಿ ಪ್ರಮುಖರು. ಇವರ ಸ್ಮರಣೆಯಲ್ಲಿ ಧಾರವಾಡದ ಜಕಣಿ ಬಾವಿ ಹತ್ತಿರ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಇಂದಿಗೂ ಇದೆ ಎಂದರು. ಕರ್ನಾಟಕ ವಿಶ್ವವಿದ್ಯಾಲಯದ ಗಾಂಽ ಅಧ್ಯಯನ ವಿಭಾಗದ ನಿಕಟಪೂರ್ವ ಮುಖ್ಯಸ್ಥ ಪ್ರೊ. ಶಿವಾನಂದ ಶೆಟ್ಟರ, ಸಿದ್ದನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ವೇದಿಕೆ ಮೇಲೆ ಚಂದ್ರಕಾAತ ಬೆಲ್ಲದ, ಸುವರ್ಣ ಹಿರೇಮಠ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಎಸ್.ವಿ. ಅಯ್ಯನಗೌಡರ, ಗುರು ತಿಗಡಿ, ಡಾ. ಬಾಳಪ್ಪ ಚಿನಗುಡಿ, ಇತರರಿದ್ದರು. ದತ್ತಿ ಅಂಗವಾಗಿ ಆಯೋಜಿಸಿದ್ದಸರ್ಕಾರಗಳ ಉಚಿತ ಕೊಡುಗೆಗಳು ಸರಿಯೆ?' ವಿಷಯ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೀತಾ ಶಶಿಕಾಂತ ಬಡಿಗೇರ, ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯದ ಬಶೀರಅಹ್ಮದ ಪ್ರಥಮ ಸ್ಥಾನ, ಕರ್ನಾಟಕ ಕಲಾ ಮಹಾವಿದ್ಯಾಲಯದ ಮಂಜುನಾಥ ಎಂ. ಹಾಗೂ ಫಕ್ಕೀರಮ್ಮ ತೋಟದ ದ್ವಿತೀಯ ಮತ್ತು ರಾಯಾಪೂರ ಎಸ್.ಜೆ.ಎಂ.ವಿ. ಮಹಾಂತ ಕಾಲೇಜಿನ ಅಂಜಲಿ ಜಿನ್ನಪ್ಪ ಹಾಗೂ ಕೆ.ಎಸ್. ಜಿಗಳೂರು ಕಾಲೇಜಿನ ಪದ್ಮಾವತಿ ಜಿನ್ನಪ್ಪನವರ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದರಿಗೆ ಪ್ರಮಾಣಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net