

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಕರಾವಳಿಯ ಬಂಟ ಸಮುದಾಯವದರು. ಇದುವರೆಗೆ 9 ಮಂದಿ ಬಂಟ ನಾಯಕರು ಸಂಸತ್ ಪ್ರವೇಶಿಸಿದ್ದು, ಈಗ 10ನೇಯವರಾಗಿ ಚೌಟ ಈ ಸಾಲಿಗೆ ಸೇರಿದ್ದಾರೆ.
ಮಂಗಳೂರು (ದ.ಕ.) ಕ್ಷೇತ್ರದಿಂದ ಎ.ಶಂಕರ ಆಳ್ವ, ಕೆ.ಕೆ.ಶೆಟ್ಟಿ (ಕಾಂಗ್ರೆಸ್), ನಳಿನ್ಕುಮಾರ್ ಕಟೀಲ್ (ಬಿಜೆಪಿ), ಉಡುಪಿ ಕ್ಷೇತ್ರದಿಂದ ಐ.ಎಂ.ಜಯರಾಮ ಶೆಟ್ಟಿ (ಬಿಜೆಪಿ), ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್), ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೆ.ಎಸ್.ಹೆಗ್ಡೆ (ಜನತಾ ಪಕ್ಷ), ಕಾಸರಗೋಡು ಕ್ಷೇತ್ರದಿಂದ ಎಂ.ರಾಮಣ್ಣ ರೈ (ಸಿಪಿಐಎಂ), ಐ.ರಾಮ ರೈ (ಕಾಂಗ್ರೆಸ್), ಮುಂಬೈ ನಾರ್ತ್ ಕ್ಷೇತ್ರದಿಂದ ಗೋಪಾಲ್.ಸಿ.ಶೆಟ್ಟಿ (ಬಿಜೆಪಿ) ಈ ಹಿಂದೆ ಸಂಸತ್ಗೆ ಚುನಾಯಿತರಾದ ಬಂಟ ನಾಯಕರು.
.................