

ಮಂಗಳೂರು : ರಾಷ್ಟ್ರ ವಿರೋಧಿ ಶಕ್ತಿಗಳ ಜತೆ ಸೇರಿಕೊಂಡಿರುವ ಕಾಂಗ್ರೆಸ್ ಹಿಂದುಗಳನ್ನು ದಮನಿಸುವ ಕಾರ್ಯದಲ್ಲಿ ತೊಡಗಿದೆ. ಬಿಜೆಪಿಯ
ಭದ್ರಕೋಟೆಯಾಗಿರುವ ದ.ಕ.ದಲ್ಲಿ ಹಿಂದುಗಳನ್ನು ಕೆಣಕುವ ಪ್ರಯತ್ನ ಮಾಡಿದರೆ ಬಿಜೆಪಿ ಸುಮ್ಮನಿರುವುದಿಲ್ಲ ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಬಂಟ್ವಾಳದಲ್ಲಿನ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಕಾನೂನು ರೀತಿಯ ಹೋರಾಟವನ್ನು ಬಿಜೆಪಿ ಕೈಗೊಳ್ಳಲಿದೆ . ಬಿಜೆಪಿ ಸದಾ ಹಿಂದು ಕಾರ್ಯಕರ್ತರ ಪರವಾಗಿ ಇರಲಿದೆ ಎಂದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿವೆ. ಪೊಲೀಸರು ಕೂಡ ಸರ್ಕಾರದ ಆಣತಿಯಂತೆ ನಡೆಯುತ್ತಿರುವುದು ವಿಪರ್ಯಸ. ಸಿದ್ದರಾಮಯ್ಯನವರು ಹಿಂದುಗಳನ್ನು ಹೆದರಿಸುವ ಕೆಲಸ ಮಾಡುತ್ತಿದ್ದರೆ, ಆ ಭ್ರಮೆಯಿಂದ ಹೊರಬರುವುದು ಒಳಿತು ಎಂದು ಕ್ಯಾ. ಚೌಟ ಹೇಳಿದರು.