ಸಾಮರ್ಥ್ಯ ಅಭಿವೃದ್ಧಿ ತರಬೇತಿ ಅಗತ್ಯ

S.V.S B.Ed students photo-2.1-003
Published on

ಚಿತ್ರದುರ್ಗ: ಗುಣಮಟ್ಟದ ಬೋಧನೆಗಾಗಿ ಶಿಕ್ಷಕರಿಗೆ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿ ತರಬೇತಿಗಳು ಅಗತ್ಯವಿದೆ ಎಂದು ಡಯಟ್‌ನ ಪ್ರಭಾರಿ ಪ್ರಾಚಾರ‌್ಯ ಡಿ.ಆರ್.ಕೃಷ್ಣಮೂರ್ತಿ ಹೇಳಿದರು.

ನಗರದ ಡಯಟ್‌ನಲ್ಲಿ ಗುರುವಾರ ಹೊಸದುರ್ಗ ನಗರದ ಎಸ್.ವಿ.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಡಯಟ್ ಪಾತ್ರ ಕುರಿತ ಕಾರ‌್ಯಾಗಾರದಲ್ಲಿ ಮಾತನಾಡಿದ ಅವರು,ಶಿಕ್ಷಕರು ವೃತ್ತಿಯನ್ನು ಪ್ರೀತಿಸಬೇಕು.

ವಿವಿಧ ಬೋಧನಾ ಕೌಶಲಗಳಲ್ಲಿ ಸಾಮರ್ಥ್ಯ ಪಡೆಯುವುದರ ಜತೆಗೆ ನಿರಂತರ ಅಧ್ಯಯನಶೀಲರಾಗಿ ಪಠ್ಯ ವಿಷಯವನ್ನು ಆಸಕ್ತಿದಾಯಕವಾಗಿ ಬೋಧಿಸಬೇಕೆಂದರು.

ಉಪನ್ಯಾಸಕ ಎಸ್.ಬಸವರಾಜು ಮಾತನಾಡಿದರು.

ಹಿರಿಯ ಉಪನ್ಯಾಸಕ ಮಹಮ್ಮದ್ ಅಯೂಬ್ ಸೊರಬ್,ಉಪನ್ಯಾಸಕರಾದ ಕೆ.ಜಿ.ಪ್ರಶಾಂತ್,ಯು.ಸಿದ್ದೇಶಿ,ಬಿ.ಎಸ್.ನಿತ್ಯಾನಂದ,ಎನ್.ರಾಘವೇಂದ್ರ, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್,ಆರ್.ಲಿಂಗ ರಾಜು ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.

------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net