ಕ್ಯಾಂಟರ್​& ಆಟೋ ಡಿಕ್ಕಿ, ಓರ್ವ ಸಾವು

Canter & auto collision, one dead
Published on

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ರಾಜ್ಯ ಹೆದ್ದಾರಿಯ ಕವಡಿಮಟ್ಟಿ&ಹಿರೇಮುರಾಳ ಗ್ರಾಮಗಳ ಮಧ್ಯೆ ಮಿಕ್ಸಿಂಗ್​ ಪ್ಲಾಂಟ್​ ಹತ್ತಿರ ಶನಿವಾರ ಕ್ಯಾಂಟರ್​& ಆಟೋ ಡಿಕ್ಕಿಯಾಗಿ ಚವನಭಾವಿ ಗ್ರಾಮದ ಕರೆಪ್ಪ ನಾಲತವಾಡ (55) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಆಟೋ ಚಾಲಕ ಯಮನಪ್ಪ (ಮುತ್ತಪ್ಪ) ಜೋಗಂಡಭಾವಿ ತೀವ್ರ ಗಾಯಗೊಂಡಿದ್ದು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ವನಭಾವಿಯಲ್ಲಿ ಕಿರಾಣಿ ಅಂಗಡಿ ವ್ಯಾಪಾರ ಮಾಡುತ್ತಿದ್ದ ಕರೆಪ್ಪ ಮುದ್ದೇಬಿಹಾಳಕ್ಕೆ ಬಂದು ಚುರಮುರಿ (ಮಂಡಕ್ಕಿ) ಸೇರಿ ಅಗತ್ಯ ಕಿರಾಣಿ ಸಾಮಗ್ರಿ ಖರೀದಿಸಿ ಆಟೋದಲ್ಲಿ ಮರಳಿ ಊರಿಗೆ ಹೋಗುವಾಗ ಎದುರಿನಿಂದ ಬಂದ ಮಲಗಲದಿನ್ನಿಯ ಕ್ಯಾಂಟರ್​ ಡಿಕ್ಕಿ ಹೊಡೆದಿದೆ.

ಕ್ಯಾಂಟರ್​ ಚಾಲಕ ಅಪಘಾತವಾಗಿದ್ದಕ್ಕೆ ಬೆದರಿ ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಮುದ್ದೇಬಿಹಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net