

ವಿಕ್ರಮ ನಾಡಿಗೇರ ಧಾರವಾಡ
ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ 2006-07ರಲ್ಲಿ ರಾಜ್ಯದಲ್ಲಿ "ಭಾಗ್ಯಲಕ್ಷ್ಮಿ' ಯೋಜನೆ ಜಾರಿಗೆ ತರಲಾಗಿತ್ತು. ಆ ಯೋಜನೆಗೆ ನೋಂದಾಯಿಸಿದ್ದ ಜಿಲ್ಲೆಯ 8,882 ಫಲಾನುಭವಿಗಳು ಮೊದಲ ಬಾರಿಗೆ ಯೋಜನೆಯ ಪರಿಪಕ್ವ ಹಣ ಪಡೆಯಲು ಸಿದ್ಧರಾಗಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ತಡೆ, ಹೆಣ್ಣು ಮಗುವಿನ ಶಿಕ್ಷಣ, ಲಿಂಗಾನುಪಾತ ಉತ್ತಮ ಪಡಿಸಲು ಸೇರಿ ಇತರ ಕಾರಣಕ್ಕೆ ಅಂದಿನ ರಾಜ್ಯ ಸರ್ಕಾರ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿತ್ತು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಸರ್ಕಾರ ನಿಶ್ಚಿತ ಠೇವಣಿ ಹೂಡಿ, ಮಗುವಿಗೆ 18 ವರ್ಷ ರ್ಪೂಣಗೊಂಡ ಬಳಿಕ ಬಡ್ಡಿ ಸಹಿತ ಪರಿಪಕ್ವ ಹಣ ನೀಡುವುದು ಯೋಜನೆಯ ಉದ್ದೇಶ.
ಅದರಂತೆ 2006-07ರಲ್ಲಿ ಜಿಲ್ಲೆಯಲ್ಲಿ ಯೋಜನೆ ಅಡಿ 8,882 ಬಾಂಡ್ಗಳನ್ನು ಸ್ವೀಕರಿಸಲಾಗಿತ್ತು. ಅಂದು ಹೆಸರು ನೋಂದಾಯಿಸಿ 18 ವರ್ಷ ರ್ಪೂಣಗೊಂಡ ಫಲಾನುಭವಿಗಳು ಮೆಚ್ಯುರಿಟಿ ಬೆನಿಫಿಷಿಯರ್ಗೆ ಅರ್ಹರಾಗಿದ್ದಾರೆ. ಹೀಗಾಗಿ ಅವರಿಂದ ಅಗತ್ಯ ದಾಖಲೆ ಪಡೆಯುವಂತೆ ಎಲ್ಲ ತಾಲೂಕು ಅಧಿಕಾರಿಗಳಿಗೆ (ಸಿಡಿಪಿಒ) ಸೂಚಿಸಿದ್ದು, ಇನ್ನೊಂದು ತಿಂಗಳಲ್ಲಿ ಆದ್ಯತೆ ಮೇರೆಗೆ ಅವರ ಖಾತೆಗಳಿಗೆ ಜಮೆ ಆಗಲಿವೆ. ಜಿಲ್ಲೆಯಲ್ಲಿ 2ನೇ ಮಗುವಿಗೆ ಒಬ್ಬರೂ ನೋಂದಣಿ ಮಾಡಿಸದಿರುವುದು ವಿಶೇಷ.
ಏನಿದು ಯೋಜನೆ: ಹೆಣ್ಣು ಮಗುವಿಗೆ ಆಥಿರ್ಕ ಸೌಲಭ್ಯ ನೀಡುವುದೇ ಯೋಜನೆಯ ಪ್ರಮುಖ ಉದ್ದೇಶ. ಆದರೆ ಯೋಜನೆಗೆ ಅರ್ಹರಾಗಲು ಮಗುವಿನ ಪಾಲಕರು ಕೆಲ ನಿಬಂಧನೆಗಳನ್ನು ಪಾಲಿಸಿರಬೇಕು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ 31-3-2006ರ ನಂತರ ಜನಿಸಿದ ಹೆಣ್ಣು ಮಕ್ಕಳು ಯೋಜನೆಗೆ ಅರ್ಹರು. ಮಗು ಜನಿಸಿದ ಒಂದು ವರ್ಷದಲ್ಲಿ ಜನನ ಪ್ರಮಾಣ ಪತ್ರ ಒದಗಿಸಿ ನೋಂದಾಯಿಸಲು ಅವಕಾಶವಿತ್ತು.
ಇದೀಗ ಯೋಜನೆಯ ಹಣ ನೀಡುವಾಗಲೂ ಇಲಾಖೆ ಅಧಿಕಾರಿಗಳು ಈ ನಿಯಮಗಳನ್ನು ಪರಿಶೀಲಿಸಲಿದ್ದಾರೆ. ಹಣ ಪಡೆಯಲು ಮೂಲ ಭಾಗ್ಯಲಕ್ಷ್ಮಿ ಬಾಂಡ್, 8ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಶಾಲಾ ಮುಖ್ಯ ಶಿಕ್ಷಕರ ದೃಢೀಕರಣಪತ್ರ, ಬಿಪಿಎಲ್ ಕಾರ್ಡ್, ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡು ಮೂರು ಮಕ್ಕಳು ಮೀರಿರದಂತಿರಬೇಕು. ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗಿರಬಾರದು ಎನ್ನುವ ನಿಯಮಕ್ಕೆ ಬದ್ಧರಾಗಿರುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಹಣ ದೊರೆಯಲಿದೆ.
ಯಾವ ದಾಖಲೆ ಅಗತ್ಯ?: ಲಾನುಭವಿಗಳ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಯೋಜನೆಯ ನೈಜ (ಒರಿಜಿನಲ್) ಬಾಂಡ್, ಮಗುವಿನ ಜನನ ಪ್ರಮಾಣ ಪತ್ರ, ತಂದೆ, ತಾಯಿ, ಮಗುವಿನ ಹೆಸರು ಬದಲಾವಣೆಯಾಗಿದ್ದರೆ ಸಂಬಂಧಿಸಿದ ಸಿಡಿಪಿಒ ಅವರಿಂದ ದೃಢೀಕರಣ ಪತ್ರ, ಬಾಂಡ್ ಕಳೆದಿದ್ದರೆ ಬಾಂಡ್ ನಕಲು ಪ್ರತಿ ಜತೆ ಎಫ್ಐಆರ್ ಪ್ರತಿ, ದತ್ತು ಮಕ್ಕಳಾಗಿದ್ದಲ್ಲಿ ಕಾನೂನಾತ್ಮಕವಾಗಿ ದತ್ತು ಪಡೆದ ಪೋಷಕರ ಹೆಸರನ್ನು ಸಿಡಿಪಿಒ ದೃಢೀಕರಿಸಬೇಕು ಎಂದು ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಲಾನುಭವಿಗಳ ಮಾಹಿತಿ: ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿಯೋಜನೆಗೆ ಒಟ್ಟು 8,882 ಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಧಾರವಾಡ ಗ್ರಾಮಾಂತರದಲ್ಲಿ 1,719, ಹುಬ್ಬಳ್ಳಿ ಗ್ರಾಮಾಂತರದಲ್ಲಿ 928, ಹು-ಧಾ ಶಹರದಲ್ಲಿ 2,741, ಕಲಘಟಗಿಯಲ್ಲಿ 1,137, ಕುಂದಗೋಳದಲ್ಲಿ 1,152 ಹಾಗೂ ನವಲಗುಂದ ತಾಲೂಕಿನಲ್ಲಿ 1,205 ಲಾನುಭವಿಗಳಿದ್ದಾರೆ.
ಭಾಗ್ಯಲಕ್ಷ್ಮಿಯೋಜನೆ ಆರಂಭವಾದ ಸಮಯದಲ್ಲಿ ಜಿಲ್ಲೆಯಲ್ಲಿ 8,882 ಬಾಂಡ್ಗಳನ್ನು ಸ್ವೀಕರಿಸಲಾಗಿತ್ತು. ಇದೀಗ 18 ವರ್ಷ ಪೂರೈಸಿದ್ದರಿಂದ ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. *ಪದ್ಮಾವತಿ ಜಿ.ಎಸ್., ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ