ಮೈಸೂರಿನಲ್ಲಿ 8 ಲಕ್ಷ ರೂ. ಮೌಲ್ಯದ ಗಾಂಜಾ ವಶ

drugs
Published on

ಮೈಸೂರು: ಮತ್ತೊಂದು ಪ್ರಕರಣದಲ್ಲಿ ದಸರಾ ಸಂದರ್ಭ ಬೆಲವತ್ತ ವರ್ತುಲ ರಸ್ತೆಯಲ್ಲಿ ಗೂಡ್ಸ್ ಆಟೋದಲ್ಲಿ ಅ.14 ರಂದು 8 ಲಕ್ಷ ರೂ. ಮೌಲ್ಯದ 15 ಕೆ.ಜಿ. 580 ಗ್ರಾಂ ತೂಕದ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಡಿಸಿಪಿ ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ಎಸಿಪಿ ಎಸ್.ಎನ್. ಸಂದೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕ ಇನ್ಸ್‌ಪೆಕ್ಟರ್ ಜಿ.ಶೇಖರ್, ಕೆ.ಸಿ. ಪೂವಯ್ಯ, ಎಸ್‌ಐಗಳಾದ ಮಾರುತಿ ಅಂತರಗಟ್ಟಿ, ಪ್ರತಿಭಾ ಜಂಗವಾಡ, ರಾಜು ಕೋನಕೇರಿ, ಕಿರಣ್ ಹಂಪಿಹೊಳಿ, ಎಎಸ್‌ಐಗಳಾದ ನಾಗೇಶ್, ಅಸ್ಗರ್‌ಖಾನ್, ಜಗದೀಶ್, ಸಿಬ್ಬಂದಿ ಸಲೀಂ ಪಾಷ, ರಾಮಸ್ವಾಮಿ, ಉಮಾ ಮಹೇಶ್, ಟಿ.ಪ್ರಕಾಶ್, ನರಸಿಂಹರಾಜು, ಗೋವಿಂದ, ಚಂದ್ರಶೇಖರ್, ಕೆ.ಎಸ್.ರವಿ, ಅನಿಲ್, ಮಂಜುನಾಥ್, ಮಧು ಕುಮಾರ್, ರಘು, ಅರುಣ್ ಕುಮಾರ್, ಕೆ. ಪುಟ್ಟಮ್ಮ, ಮಮತ, ಕೆ.ಜಿ. ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net