

ಮೊಳಕಾಲ್ಮೂರು: ತಾಲೂಕಿನ ರಾಯಾಪುರ ಗ್ರಾಮದ ರೈತನೊಬ್ಬ ತೋಟದಲ್ಲಿ ಬೆಳೆದಿದ್ದ 89 ಕೆಜಿ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಬುಧವಾರ ಸಂಜೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ರೈತ ಭೈರಯ್ಯ ತೋಟದ ಹತ್ತಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ, 4.50 ಲಕ್ಷ ರೂ. ಮೌಲ್ಯದ 89 ಕೆಜಿ ಗಾಂಜಾ ಸೊಪ್ಪು ವಶ ಪಡೆದಿದ್ದಾರೆ.
ಜಿಲ್ಲಾ ಅಬಕಾರಿ ಉಪ ಆಯುಕ್ತ ಬಿ.ಮಾದೇಶ, ತಾಲೂಕು ನಿರೀಕ್ಷಕ ಸಾದತ್‌ಉಲ್ಲಾ, ಸಿಬ್ಬಂದಿ ಪರುಶುರಾಮ್, ಈರಣ್ಣ, ವೀರೇಶ್, ಮಲ್ಲಿಕಾರ್ಜುನ, ಶಿವಮೂರ್ತಿ, ಶರಣಪ್ಪ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.