

ಆಲೆಟ್ಟಿ: ಆಲೆಟ್ಟಿ ಗ್ರಾಮ ಕಾಂಗ್ರೆಸ್ ವತಿಯಿಂದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ, ದಾಳಿಯಿಂದ ಮಡಿದವರಿಗೆ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ನಾಗಪಟ್ಟಣ ಸೇತುವೆ ಬಳಿ ನಡೆಯಿತು.
ಉಗ್ರಗಾಮಿಗಳ ದಾಳಿ ಖಂಡಿಸಿ ಹಿರಿಯ ಕಾಂಗ್ರೆಸ್ ಮುಖಂಡ ಬಾಪೂ ಸಾಹೇಬ್ ಅರಂಬೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಗೀತಾ ಕೊಲ್ಚಾರು, ಗೋಕುಲ್‌ದಾಸ್, ನಗರ ಪಂಚಾಯಿತಿ ಸದಸ್ಯ ಶರೀಫ್ ಕಂಠಿ, ಮಹೇಶ್ ಬೆಳ್ಳಾರ್ಕರ್ ಮಾತನಾಡಿದರು.
ಮುತ್ತಪ್ಪ ಪೂಜಾರಿ ಮೊರಂಗಲ್ಲು, ರಾಧಾಕೃಷ್ಣ ಪರಿವಾರಕನ, ಯೂಸೂಫ್ ಅಂಜಿಕ್ಕಾರು, ರಿಯಾಝ್ ಕಟ್ಟೆಕ್ಕಾರ್, ಅಮ್ಮು ರೈ ಆರಂಬೂರು, ಚಿದಾನಂದ ಕುಂಚಡ್ಕ, ಬಾಬೆ ಕುಡೇಕಲ್ಲು, ಆನಂದ ನಾಗಪಟ್ಟಣ, ಜೀವರತ್ನ, ಕೇಶವ ಮೊರಂಗಲ್ಲು, ಗೋಪಾಲ ಗುಂಡ್ಯ, ವಿಜಯ ಆಲೆಟ್ಟಿ, ನವೀನ ಆಲೆಟ್ಟಿ, ತವಿದ್ ಆರಂಬೂರು, ಶಾಹಿದ್ ಪಾರೆ, ಸತ್ಯನಾರಾಯಣ ಕುಡೆಕಲ್ಲು, ಖಾದರ್ ಆಲೆಟ್ಟಿ, ಚಂದ್ರಶೇಖರ ಕೊಲ್ಚಾರ್, ನಾರಾಯಣ ರೈ ಅರಂಬೂರು ಭಾಗವಹಿಸಿದ್ದರು. ಗ್ರಾಪಂ ಸದಸ್ಯ ಧರ್ಮಪಾಲ ಕೊಯಿಂಗಾಜೆ ಸ್ವಾಗತಿಸಿದರು. ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತ್ಯಕುಮಾರ ಅಡಿಂಜ ವಂದಿಸಿದರು.