ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಮೊಂಬತ್ತಿ ಮೆರವಣಿಗೆ

7 kollegal-4,,,
ಡಾ.ಬಿ.ಅಂಬೇಡ್ಕರ್ 68ನೇ ಪರಿನಿಬ್ಬಾಣ ದಿನದ ಅಂಗವಾಗಿ ಕೊಳ್ಳೇಗಾಲದ ಭೀಮನಗರ ಯಜಮಾನರು ಮುಖಂಡರು ಹಾಗೂ ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಮೊಂಬತ್ತಿ ಮೆರವಣಿಗೆ ನಡೆಸಿದರು.
Published on

ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಶುಕ್ರವಾರ ಸಂಜೆ ಪಟ್ಟಣದ ಭೀಮನಗರ ಬಡಾವಣೆ ಸೇರಿದಂತೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೊಂಬತ್ತಿ ಮೆರವಣಿಗೆ ನಡೆಯಿತು.

ಭೀಮನಗರದ ಶ್ರೀ ಚೌಡಮ್ಮನಗುಡಿ ಆವರಣದಲ್ಲಿ ಸಂಜೆ ಮೊಂಬತ್ತಿ ಮೆರವಣಿಗೆಗೆ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಆನಂದಮೂರ್ತಿ ಹಾಗೂ ನಗರಸಭಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್ ಪುಷ್ಪನಮನ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ಬಳಿಕ ಪಟ್ಟಣದ ಪಟ್ಟಣದ ಸರ್ಕಾರಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಜತೆಗೂಡಿ ಭೀಮನಗರದ ಯಜಮಾನರು, ಹಲವು ದಲಿತ ಮುಖಂಡರು ಸೇರಿದಂತೆ ನೂರಾರು ಜನರು ಬುದ್ಧಂ ಶರಣ ಗಚ್ಛಾಮಿ ಎಂದು ಪಟಿಸುತ್ತಾ ಮೊಂಬತ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಭೀಮನಗರದ ಶ್ರೀ ಚೌಡಮ್ಮನಗುಡಿ ಆವರಣದಿಂದ ಸಾಗಿದ ಮೆರವಣಿಗೆ ಸಾಮಂದಿಗೇರಿ ಬೀದಿ, ಕನ್ನಿಕಾ ಪರಮೇಶ್ವರಿ ರಸ್ತೆ, ಚಿಕ್ಕ ಮಸೀದಿ ವೃತ್ತ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮೂಲಕ ಸಾಗಿ ಎಸ್.ವಿ.ಕೆ. ಕಾಲೇಜು ಬಳಿಯಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಬಳಿ ಮುಕ್ತಾಯಗೊಂಡಿತು.

ಮೆರವಣಿಗೆಯಲ್ಲಿ ಮೊಂಬತ್ತಿ ಹಿಡಿದು ಸಾಗಿ ಬಂದ ನೂರಾರು ಜನರು ಅಂಬೇಡ್ಕರ್ ಪ್ರತಿಮೆ ಮಂಟಪದ ಸುತ್ತಲೂ ಮೊಂಬತ್ತಿ ಬೆಳಗಿಸಿದರು. ಈ ವೇಳೆ 2 ನಿಮಿಷ ಮೌನಾಚರಣೆ ಮಾಡಿದರು. ಇದೇ ವೇಳೆ ಆಗಮಿಸಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಮೆರವಣಿಗೆಯಲ್ಲಿ ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಯಜಮಾನರಾದ ಕೆ.ಎಂ.ಸಿದ್ಧಾರ್ಥ, ಕುಮಾರ್, ಸನತ್‌ಕುಮಾರ್, ಎಸ್.ರಾಜಶೇಖರಮೂರ್ತಿ, ನಾಗೇಶ್, ಪಾಪಣ್ಣ, ಲಿಂಗರಾಜು, ಶಿವಪ್ಪ, ಮಾಜಿ ಯಜಮಾನರಾದ ನಟರಾಜು, ಸೋಮಶೇಖರ್, ಕೆ.ಜೆ.ಜವರಪ್ಪ, ಜಗದೀಶ್, ಶಾಂತರಾಜು, ವಿಜಯ್, ಹುಚ್ಚಪ್ಪ, ಎಸ್.ಎಲ್.ಲಿಂಗರಾಜು, ನಗರಸಭಾ ಮಾಜಿ ಅಧ್ಯಕ್ಷ ಎಸ್.ರಮೇಶ್, ಸದಸ್ಯ ಎಸ್.ಮಂಜುನಾಥ್, ಮಾಜಿ ಸದಸ್ಯ ಚಂದು, ಮುಖಂಡರಾದ ಎಂ.ನಟರಾಜ ಮಾಳಿಗೆ, ಸಿ.ಪುಟ್ಟಬುದ್ಧಿ, ಎಂ.ನಟರಾಜು, ಡಾ.ಗುರುಮೂರ್ತಿ, ದೇವಾನಂದ್, ಬಿ.ಮೂರ್ತಿ, ಚಿನ್ನಸ್ವಾಮಿ ಮಾಳಿಗೆ, ದಿಲೀಪ್, ರಾಜಶೇಖರಮೂರ್ತಿ, ಶ್ರೀಧರ್, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹದೇವ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net