

ಸುಳ್ಯ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಮಡಿದವರಿಗೆ ಸುಳ್ಯ ಯುವ ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿಯಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರು ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ, ಮೌನ ಪ್ರಾರ್ಥನೆ ಸಲ್ಲಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಎಎಪಿ ಮುಖಂಡ ಅಶೋಕ್ ಎಡಮಲೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಘಟನೆ ಖಂಡಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಕೆ.ಗೋಕುಲ್ ದಾಸ್, ದಿನೇಶ್ ಅಂಬೆಕಲ್ಲು, ಭವಾನಿಶಂಕರ ಕಲ್ಮಡ್ಕ, ಸಿದ್ದಿಕ್ ಕೊಕ್ಕೊ, ನಂದರಾಜ ಸಂಕೇಶ, ಎಸ್‌ಕೆ.ಹನೀಫ್ ಸಂಪಾಜೆ, ಜಿ.ಕೆ.ಹಮೀದ್ ಗೂನಡ್ಕ, ರಾಧಾಕೃಷ್ಣ ಪರಿವಾರಕಾನ, ಅಬ್ಬಾಸ್, ಭೋಜಪ್ಪ ನಾಯ್ಕ ಅಡ್ಕಾರು, ಚಂದ್ರಶೇಖರ ಕೋಲ್ಚಾರ್, ಸುರೇಶ್ ಎಂ.ಎಚ್, ರಿಯಾಜ್ ಕಟ್ಟೆಕಾರ್, ಧರ್ಮಪಾಲ ಕೊಯಿಂಗಾಜೆ, ಆಶಿಕ್ ಅರಂತೋಡು, ಭಾಸ್ಕರ ಪೂಜಾರಿ ದುಗಲಡ್ಕ, ಕೇಶವ ಮೊರಂಗಲ್ಲು, ನಜೀರ್ ಶಾಂತಿನಗರ, ಸುರೇಶ್ ಕಾಮತ್ ಮೊದಲಾದವರಿದ್ದರು. ಶಶಿಧರ ಎಂ.ಜೆ. ಕಾರ್ಯಕ್ರಮ ನಿರ್ವಹಿಸಿದರು.