

ಧಾರವಾಡ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಘಟನೆ ಖಂಡಿಸಿ ಜುಬಿಲಿ ವೃತ್ತದಲ್ಲಿ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳ ವತಿಯಿಂದ ರಾತ್ರಿ ಮೇಣದ ಬತ್ತಿಯ ಮೆರವಣಿಗೆ ನಡೆಸಲಾಯಿತು. ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ಶಂಕರ ಶೇಳಕೆ, ಅನಿತಾ ಚಳಗೇರಿ, ಮುಖಂಡರಾದ ಮಂಜುನಾಥ ಮಲ್ಲಿಗವಾಡ, ಬಸವರಾಜ ಗರಗ, ಸಂಜಯ ಕಪಟಕರ, ನಾಗರಾಜ ನಾಯಕ, ಪುಟ್ಟು ನಾಯಕ, ಇತರರು ಇದ್ದರು.