ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಣೆ

Candle lighting and tribute offering
Candle lighting and tribute offering
Published on

ತೇರದಾಳ: ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಮೊಂಬತ್ತಿ ಹಚ್ಚಿ ಸ್ಥಳೀಯ ಬಿಜೆಪಿ ನಗರ ಘಟಕದಿಂದ ಬುಧವಾರ ಸಂಜೆ ಪಟ್ಟಣದ ಹನುಮಾನ ದೇವಸ್ಥಾನ ಬಳಿ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮುಖಂಡರಾದ ಬಾಳು ದೇಶಪಾಂಡೆ, ಸುರೇಶ ರೇಣುಕೆ ಮಾತನಾಡಿ, ಉಗ್ರರ ಅಟ್ಟಹಾಸವನ್ನು ಭಾರತೀಯರು ಎಂದೂ ಸಹಿಸುವುದಿಲ್ಲ. ಅದಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡುತ್ತದೆ. ಜಮ್ಮು-ಕಾಶ್ಮೀರದಲ್ಲಿ ವಿಧಿ 370 ರದ್ದಾದ ನಂತರ ಇದು ಮೊದಲ ದಾಳಿಯಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಮಹಾವೀರ ಕೊಕಟನೂರ, ಸಿದ್ದು ಅಮ್ಮಣಗಿ, ಸಂತೋಷ ಜಮಖಂಡಿ, ನಿಂಗಪ್ಪ ಮಾಲಗಾಂವಿ, ವರ್ಧಮಾನ ಕಡಹಟ್ಟಿ, ಶಂಕರ ಕುಂಬಾರ, ಸಂಗಮೇಶ ಕಾಲತಿಪ್ಪಿ, ಮುರಗೇಶ ಮಿರ್ಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net