

ಧಾರವಾಡ: ನಗರದ ಕೆಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನಾಮಪತ್ರ ಸಲ್ಲಿಕೆಗಾಗಿ ಬುಧವಾರ ಆಗಮಿಸಿದ್ದ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಾಗಿ ಕಾದು ಕುಳಿತ ಘಟನೆ ನಡೆಯಿತು.
ಕೆಸಿಸಿ ಬ್ಯಾಂಕ್ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ನಾಮಪತ್ರ ಸಲ್ಲಿಕೆಗೆ ಸೆ. 22 ಕೊನೆಯ ದಿನವಾಗಿದೆ. ಬುಧವಾರ ಮೂರೂ ಜಿಲ್ಲೆಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗಾಗಿ ಬ್ಯಾಂಕ್‌ಗೆ ಆಗಮಿಸಿದ್ದರು. ಆದರೆ, ಚುನಾವಣಾಽಕಾರಿ ಇಲ್ಲದೆ ಮಧ್ಯಾಹ್ನ 1 ಗಂಟೆಯವರೆಗೆ ಗೊಂದಲ ಸೃಷ್ಟಿಯಾಗಿತ್ತು.
ಧಾರವಾಡ ತಹಸೀಲ್ದಾರ್ ದೊಡ್ಡಪ್ಪ ಹೂಗಾರ ಅವರನ್ನು ಚುನಾವಣಾಽಕಾರಿಯಾಗಿ ನೇಮಕಗೊಂಡಿದ್ದಾರೆ. ಬೆಳಗ್ಗೆ 11ರಿಂದ ನಾಮಪತ್ರ ಸಲ್ಲಿಕೆ ಅವಧಿ ಆರಂಭವಾಗಿತ್ತು. ಆದರೆ, ಮಧ್ಯಾಹ್ನ 1 ಗಂಟೆವರೆಗೂ ಅವರು ನಾಮಪತ್ರ ಸ್ವೀಕರಿಸಲು ಆಗಮಿಸಲಿಲ್ಲ. ಇದರಿಂದ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು.
ಅಭ್ಯರ್ಥಿಗಳು ಈ ಬಗ್ಗೆ ಬ್ಯಾಂಕ್ ಅಽಕಾರಿಗಳನ್ನು ವಿಚಾರಿಸಿದಾಗ ಚುನಾವಣಾಧಿಕಾರಿ ಹೂಗಾರ ಅವರು ರಾಜ್ಯಪಾಲರ ಕಾರ್ಯಕ್ರಮಕ್ಕೆ ಹೋಗಿರುವುದಾಗಿ ತಿಳಿದುಬಂತು. ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಜಿಲ್ಲಾಽಕಾರಿ ಗುರುದತ್ತ ಹೆಗಡೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಚುನಾವಣಾಧಿಕಾರಿಯಾದವರು ಶಿಷ್ಟಾಚಾರ ಪಾಲಿಸಲು ಹೋದರೆ ತಾತ್ಕಾಲಿಕವಾಗಿ ಬೇರೆಯವರನ್ನು ನಿಯೋಜಿಸಬೇಕಿತ್ತು ಎಂದು ವಾಗ್ವಾದ ನಡೆಸಿದರು.
ದೊಡ್ಡಪ್ಪ ಹೂಗಾರ ಅವರು ಸುಮಾರು 1 ಗಂಟೆಗೆ ಆಗಮಿಸಿದ ನಂತರ 8 ನಾಮಪತ್ರಗಳನ್ನು ಸ್ವೀಕರಿಸಿದರು.