ಕೆಪಿಎಸ್​ಸಿ ವಿರುದ್ಧ ಅಭ್ಯರ್ಥಿಗಳ ಆಕ್ರೋಶ

h6- KPSC MAIL
Published on

ಹುಬ್ಬಳ್ಳಿ: ಕೆಪಿಎಸ್​ಸಿ ಫೆ. 28ರಂದು ನಡೆಸಲು ನಿರ್ಧರಿಸಿರುವ ಎಫ್​ಡಿಎ ಪರೀಕ್ಷೆಗೆ ಅಭ್ಯರ್ಥಿಗಳಿಂದ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ‘ಭಾರತ ದೇಶವನ್ನೆಲ್ಲ ಕೇಳಿ ಪರೀಕ್ಷೆ ದಿನಾಂಕ ನಿಗದಿಪಡಿಸಲಾಗುವುದಿಲ್ಲ’ ಎಂದಿರುವ ಕೆಪಿಎಸ್​ಸಿ ಕಾರ್ಯದರ್ಶಿ ಜಿ. ಸತ್ಯವತಿ ವಿರುದ್ಧ ಅಭ್ಯರ್ಥಿಗಳು ಕೆಂಡಾಮಂಡಲರಾಗಿದ್ದಾರೆ.

ಕೇಂದ್ರ ಸರ್ಕಾರ ನಡೆಸುವ ಪ್ರತಿಯೊಂದು ಪರೀಕ್ಷೆ ದಿನಾಂಕವನ್ನು ಆಯಾ ರಾಜ್ಯದ ಸರ್ಕಾರಗಳಿಗೆ ಮಾಹಿತಿ ನೀಡುತ್ತದೆ. ಅದೇ ದಿನದಂದು ಇತರೆ ಪರೀಕ್ಷೆಗಳನ್ನು ನಡೆಸದಿರಲು ಆಯಾ ನೇಮಕಾತಿ ಪ್ರಾಧಿಕಾರಿಗಳು ಒಪ್ಪಿಗೆ ಸೂಚಿಸುತ್ತವೆ. ಐಪಿಬಿಎಸ್ ಕ್ಲರ್ಕ್ ಮುಖ್ಯ ಪರೀಕ್ಷೆ ದಿನಾಂಕ ಮೊದಲೇ ನಿಗದಿಯಾಗಿದೆ. ಅದೇ ದಿನ ಎಫ್​ಡಿಎ ಪರೀಕ್ಷೆ ನಡೆಸುವುದು ಎಷ್ಟು ಸರಿ? ಎಂದು ಎರಡೂ ಪರೀಕ್ಷೆ ಬರೆಯಲು ಸಿದ್ಧವಾಗಿರುವ ಅಭ್ಯರ್ಥಿಗಳು ಸಿಟ್ಟು ಹೊರಹಾಕಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವುದರ ಹಿಂದೆ ಕೆಪಿಎಸ್​ಸಿ ಸಿಬ್ಬಂದಿ ಕೈವಾಡವಿದೆ ಎಂಬುದು ಸಾಬೀತಾಗಿದೆ. ತನಿಖೆ ಕೂಡ ನಡೆಯುತ್ತಿದೆ. ಪರೀಕ್ಷೆ ದಿನಾಂಕ ನಿಗದಿಪಡಿಸುವ ಮುನ್ನ ಇತರೆ ಪರೀಕ್ಷೆಗಳು ಇವೆಯೋ ಇಲ್ಲವೋ ಎಂಬುದನ್ನು ನೋಡಿ ನಿರ್ಧರಿಸಬೇಕು. ಅದು ಬಿಟ್ಟು ‘ನಾ ಹೇಳಿದ್ದೇ ಸೈ’ ಎನ್ನುವಷ್ಟರ ಮಟ್ಟಿಗೆ ಕಾರ್ಯದರ್ಶಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ‘ಸಾಮಾಜಿಕ ಜಾಲತಾಣ’ಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಎರಡೂ ಪರೀಕ್ಷೆ ಒಂದೇ ದಿನ ಇರುವುದನ್ನು ಕೆಲ ಅಭ್ಯರ್ಥಿಗಳು ಕೆಪಿಎಸ್​ಸಿ ಇ-

ಮೇಲ್​ಗೆ ಮಾಹಿತಿ ರವಾನಿಸಿದ್ದಾರೆ. ಅಲ್ಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಸ್ವೀಕರಿಸುವವರು ಗತಿ ಇಲ್ಲ. ಕಳುಹಿಸಿದ ಇ-ಮೇಲ್ ನೋಡಿ ಪರೀಕ್ಷಾ ದಿನಾಂಕ ಮುಂದೂ ಡುತ್ತಾರೆ ಎನ್ನುವುದು ಏನು ಗ್ಯಾರಂಟಿ? ಎಂದು ಧಾರವಾಡದ ಅಭ್ಯರ್ಥಿ ಮುತ್ತು ಚಚಡಿ ಮತ್ತು ಇತರರು ಪ್ರಶ್ನಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net