ಹಳೆಯ ಗುಂಪಿನ ಅಭ್ಯರ್ಥಿಗಳು ಮತ್ತೆ ಅಧಿಕಾರಕ್ಕೆ

100
filter: 0; fileterIntensity: 0.0; filterMask: 0; module: photo; hw-remosaic: false; touch: (-1.0, -1.0); sceneMode: 8; cct_value: 0; AI_Scene: (200, 2); aec_lux: 149.64085; aec_lux_index: 0; albedo: ; confidence: ; motionLevel: -1; weatherinfo: null; temperature: 43;
Published on

ಮೂಡಲಗಿ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಕಷಿ ಸಹಕಾರ ಸಂಕ್ಕೆ ಮುಂಬರುವ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಶನಿವಾರ ಜರುಗಿದ ಚುನಾವಣೆಯ ಮತಎಣಿಕೆಯಲ್ಲಿ ಆಡಳಿತಾರೂಢ ಅಭ್ಯರ್ಥಿಗಳು ಮರು ಆಯ್ಕೆಯಾಗಿದ್ದಾರೆ.

ಸಂದ 12 ನಿರ್ದೇಶಕರ ಪೈಕಿ ಇಬ್ಬರು ಪರಿಶಿಷ್ಟ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. 10 ನಿರ್ದೇಶಕರ ಚುನಾವಣೆಯಲ್ಲಿ ಸಂದ 1225 ಮತದಾರರಲ್ಲಿ 1071ಜನ ಮತ ಚಲಾಯಿಸಿದರು. ಚುನಾವಣೆಯಲ್ಲಿ ಸಾಲಗಾರ ಸಾಮಾನ್ಯ ೇತ್ರದಿಂದ ಪ್ರಶಾಂತ ನಿಡಗುಂದಿ, ಶ್ರೀಶೆಲ ಬಳಿಗಾರ, ಪ್ರದಿಪ ಲಂಕೆಪ್ಪಣ್ಣವರ, ಶಿವಲಿಂಗಪ್ಪ ಗೋಕಾಕ, ರಾಜೀವ ಸೋನವಾಲಕರ, ಹಿಂದುಳಿದ ಅ ವರ್ಗದಿಂದ ಹಣಮಂತ ಪೂಜೇರಿ, ಬ ವರ್ಗದಿಂದ ಬಸಪ್ರಭು ಅಂಗಡಿ, ಸಾಲಗಾರ ಮಹಿಳಾ ೇತ್ರದಿಂದ ಶಿವಲೀಲಾ ಮಠಪತಿ, ಮಾಯವ್ವ ಗುಡ್ಲಮನಿ, ಬಿನ್​ ಸಾಲಗಾರರ ೇತ್ರದಿಂದ ಚನ್ನವಿರಪ್ಪ ಅಂಗಡಿ ಆಯ್ಕೆಯಾದರು. ಹಾಗೂ ಪರಿಶಿಷ್ಟ ಜಾತಿಯಿಂದ ರವೀಂದ್ರ ಸಣ್ಣಕ್ಕಿ ಮತ್ತು ಪಂಗಡದಿಂದ ಸಂಜೀವ ನಾಶಿ ಅವಿರೋಧ ಆಯ್ಕೆಯಾದರು. ವಿಜೇತ ಅಭ್ಯರ್ಥಿಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಮುಖಂಡರಾದ ಜಯಾನಂದ ಪಾಟೀಲ, ಬಸಪ್ರಭು ನಿಡಗುಂದಿ, ಜಿ.ಟಿ. ಸೋನವಾಲಕರ, ಅಪ್ಪಾಸಾಹೇಬ ಹೊಸಕೋಟಿ, ಬಿ.ಎಚ್​. ಸೋನವಾಲಕರ, ವಿಜಯಕುಮಾರ ಸೋನವಾಲಕರ, ರಾಮಣ್ಣ ಹಂದಿಗುಂದ, ಪುಲಿಕೇಶ್​ ಸೋನವಾಲಕರ, ಸಂತೋಷ ಸೋನವಾಲಕರ, ಸಿದ್ದು ಕೋಟಗಿ, ಹಣಮಂತ ಗುಡ್ಲಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net