

ಬೆಂಗಳೂರು: ಕೇಕ್ಗೆ (Cake) ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸರ್ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.
ಕೆಲವು ದಿನಗಳ ಹಿಂದೆ ಗೋಬಿ, ಕಬಾಬ್ ಮತ್ತು ಪಾನಿಪುರಿಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ (Cancer) ಕಾರಕ ಅಂಶಗಳು ಪತ್ತೆಯಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ತಿಳಿಸಿತ್ತು. ಇದೀಗ ಕೇಕ್ನಲ್ಲಿಯೂ ಕ್ಯಾನ್ಸರ್ ಅಂಶ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಕೆಲವು ಬೇಕರಿಯ ಕೇಕ್ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 12 ಮಾದರಿಯ ಕೇಕ್ಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ. ಕೇಕ್ ತಯಾರಿಕೆಗೆ ಬಳಸುವ ಬಣ್ಣಗಳು ಅಪಾಯಕಾರಿ ಅಂಶವನ್ನು ಒಳಗೊಂಡಿದೆ ಎನ್ನಲಾಗಿದೆ.
ಕೇಕ್ ತಯಾರಿಸುವಾಗ ಆಹಾರ ಸುರಕ್ಷತಾ ಪ್ರಾಧಿಕಾರದ ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಆಹಾರ ಸುರಕ್ಷತಾ ಪ್ರಾಧಿಕಾರವು ಬೇಕರಿಗಳಿಗೆ ಸೂಚನೆ ನೀಡಿದೆ.