ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ 24ರಂದು

seminar
Published on

ಶಿರಸಿ: ಪ್ರಜ್ವಲ ಟ್ರಸ್ಟ್ ವತಿಯಿಂದ ಇಲ್ಲಿನ ಸಾಮ್ರಾಟ್ ಹೋಟೆಲ್ ಎದುರಿನ ನೆಮ್ಮದಿ ಆವರಣದಲ್ಲಿ ಆ. 24ರಂದು ಬೆಳಗ್ಗೆ 10 ಗಂಟೆಗೆ ‘ಕ್ಯಾನ್ಸರ್ ಜಾಗೃತಿ’ ಕಾರ್ಯಾಗಾರ ಆಯೋಜಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ, ಹಿರಿಯ ಪತ್ರಕರ್ತೆ ಕೃಷ್ಣಿ ಶಿರೂರ ಆಗಮಿಸುವರು. ಕ್ಯಾನ್ಸರ್, ಮನೋಪಾಸ್, ಬಿಪಿ, ಶುಗರ್ ಹೀಗೆ ದಿನನಿತ್ಯ ಬಂದು ಕಾಡುವ ಹಲವಾರು ಕಾಯಿಲೆಗಳ ಬಗ್ಗೆ ಆಪ್ತ ಸಮಾಲೋಚನೆ ಹಾಗೂ ವಿಶೇಷ ರೀತಿಯ ಮುದ್ರಾ ಯೋಗ ಚಿಕಿತ್ಸಾ ವಿಧಾನಗಳನ್ನು ತಿಳಿಸಿಕೊಡುವರು. ಧಾತ್ರಿ ಆಯುರ್ವೆದ ಕೇಂದ್ರದ ಡಾ. ವಿನಾಯಕ ಹೆಬ್ಬಾರ, ಲಯನ್ಸ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ರವಿ ನಾಯ್್ಕ ವಿ.ಪಿ. ಹೆಗಡೆ ವೈಶಾಲಿ ಉಪಸ್ಥಿತರಿರುವರು. ಅಂದು ಮಧ್ಯಾಹ್ನ 3 ಗಂಟೆಯಿಂದ ಕೆರೆಕೈ, ಹಳದೋಟದ ಗಣಪತಿ ದೇವಸ್ಥಾನದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net