ಕ್ಯಾನ್ಸರ್ ಜಾಗೃತಿಗಾಗಿ ವೈದ್ಯರಿಂದ ಸೌಹಾರ್ದ ಕ್ರಿಕೆಟ್ ಪಂದ್ಯ

IMG-20230515-WA0010
Published on

ಉಡುಪಿ: ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸಲು ನಾವೆಲ್ಲ ಒಂದಾಗಿ ಹೊರೋಡೋಣ ಎಂಬ ಘೋಷ ವಾಕ್ಯದೊಂದಿಗೆ ಸೋಮವಾರ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ  ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗ, ಮಾಹೆ ಮಣಿಪಾಲ ಮತ್ತು ಟಾಟಾ ಮೆಮೋರಿಯಲ್ ಆಸ್ಪತ್ರೆ ಮುಂಬೈ ತಂಡಗಳ  ಸೌಹಾರ್ದ ಕ್ರಿಕೆಟ್ ಪಂದ್ಯ ನಡೆಯಿತು.

  ಮಾಹೆ ಮಣಿಪಾಲ  ವೈದ್ಯರ ತಂಡದ ನೇತೃತ್ವವನ್ನು  ಮಾಹೆ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ವಹಿಸಿದ್ದರು. ಟಾಟಾ ಮೆಮೋರಿಯಲ್ ಆಸ್ಪತ್ರೆ ಮುಂಬೈ ತಂಡದ ನೇತೃತ್ವವನ್ನು   ಟಾಟಾ ಮೆಮೋರಿಯಲ್ ಆಸ್ಪತ್ರೆ ಉಪನಿರ್ದೇಶಕ ಡಾ. ಶೈಲೇಶ್ ವಿ. ಶ್ರೀಕಂಡೆ ವಹಿಸಿದ್ದರು.

ಕ್ಯಾನ್ಸರ್ ರೋಗದ  ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ,  ಕ್ಯಾನ್ಸರ್ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಲಭ್ಯವಿದೆ, ಆದ್ದರಿಂದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೇ.100 ರಷ್ಟು ಗುಣಪಡಿಸಬಹುದು ಎಂಬ ಸಂದೇಶ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net