

ಕಾರವಾರ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ ಕಾಮಗಾರಿಗಳ ಪಟ್ಟಿಯನ್ನು ಪರಿಶೀಲಿಸಿ ಅಗತ್ಯ ಕಾಣಿಸದಿದ್ದರೆ ರದ್ದು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು, ನಮ್ಮ ಅನುಮತಿ ಇಲ್ಲದೇ ಯಾವುದೇ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಬೇಡಿ, ಇನ್ನೂ ಪ್ರಾರಂಭವಾಗದ ಕಾಮಗಾರಿಗಳನ್ನು ಶುರು ಮಾಡಬೇಡಿ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನರಿಗಾಗಿ ಅಲ್ಲ, ಚುನಾವಣೆಗಾಗಿ, ವೋಟ್‌ಗಾಗಿ, ದುಡ್ಡು ಹೊಡೆಯುವುದಕ್ಕಾಗಿ ಕಾಮಗಾರಿಗಳನ್ನು ಮಂಜೂರು ಮಾಡಲಾಯಿತು. ಕೇವಲ ಲೋಕೋಪಯೋಗಿ ಇಲಾಖೆಯೊಂದರಲ್ಲೇ ಕಾರವಾರ ಹಾಗೂ ಶಿರಸಿ ವಿಭಾಗದಲ್ಲಿ ಮಂಜೂರಾದ ಕಾಮಗಾರಿಗಳ 250 ಕೋಟಿ ರೂ. ಬಿಡುಗಡೆಗೆ ಬಾಕಿ ಇದೆ.
ಜಿಲ್ಲೆಯಲ್ಲಿ ಬೇರೆ ಬೇರೆ ಇಲಾಖೆಗಳು ಸೇರಿ 5 ಸಾವಿರ ಕೋಟಿಗೂ ಅಧಿಕ ಹಣ ಬಿಡುಗಡೆಗೆ ಬಾಕಿ ಇದೆ. ಇನ್ನೂ ನೂರಾರು ಕೋಟಿ ರೂ.ಗೂ ಅಽಕ ಮೊತ್ತದ ಕಾಮಗಾರಿಗಳು ಪ್ರಾರಂಭವೇ ಆಗಿಲ್ಲ.
ಇದನ್ನೂ ಓದಿ:ಸರ್ಕಾರದಲ್ಲಿ ಹಣ ಇದೆ, ಅಗತ್ಯ ಯೋಜನೆ ಜಾರಿ ಮಾಡುತ್ತೇವೆ, ಮಂಕಾಳ ವೈದ್ಯ
ಅವರು(ಬಿಜೆಪಿ ಸರ್ಕಾರ) ಮಾಡಿದ ಸಾಲವನ್ನು ನಾವು ತೀರಿಸಬೇಕು. ಅವರು ದಿವಾಳಿ ತೆಗೆದಿದ್ದನ್ನು ನಾವು ಸರಿ ಮಾಡಬೇಕು. ನಮ್ಮ ಸರ್ಕಾರ ಬಂದ ಮೇಲೆ 20 ಕೋಟಿ ರೂ. ಬಿಡುಗಡೆ ಮಾಡಿದೆವು.
ಮಂಜೂರಾದ ಕಾಮಗಾರಿ, ಬಿಡುಗಡೆಯಾದ ಹಣ, ಕಾಮಗಾರಿಗಳ ಪ್ರಗತಿ ಮುಂತಾದ ವಿವರಗಳನ್ನು ತಾಲೂಕುವಾರು ಸಲ್ಲಿಸಿ, ನಂತರ ಸ್ಥಳೀಯ ಶಾಸಕರ ಬಳಿ ಚರ್ಚಿಸಿ ಯಾವ ಕಾಮಗಾರಿಗಳನ್ನು ಮಾಡಬೇಕು ಎಂದು ತಿಳಿಸುತ್ತೇವೆ ಎಂದರು.
ಬಿಜೆಪಿ ಮಂಜೂರು ಮಾಡಿದ ಕಾಮಗಾರಿಯನ್ನು ನಾವು ಬಂದ್ ಮಾಡಬೇಕು ಎಂಬ ಉದ್ದೇಶವಿಲ್ಲ. ಯಾವುದೇ ಕಾಮಗಾರಿಗಳನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡುವುದಿಲ್ಲ. ಆದರೆ, ಗುತ್ತಿಗೆದಾರರು ತಾವು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದೇವೆ ಎನ್ನುತ್ತಿದ್ದಾರೆ. ಅವರನ್ನೂ ನಾವು ಉಳಿಸಬೇಕು ಎಂದು ಸ್ಪಷ್ಟಪಡಿಸಿದರು.
ಶಾಸಕರಾದ ಭೀಮಣ್ಣ ನಾಯ್ಕ, ಸತೀಶ ಸೈಲ್, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್, ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಎಸ್‌ಪಿ ಎನ್.ವಿಷ್ಣುವರ್ಧನ ವೇದಿಕೆಯಲ್ಲಿದ್ದರು.
ಹೆಬ್ಬಾರರಿಗೆ ಟಾಂಗ್
ಶಾಸಕ ಶಿವರಾಮ ಹೆಬ್ಬಾರ, ಈ ಹಿಂದೆ ಹಾಸ್ಟೆಲ್‌ಗಳಿಗೆ ವಿದ್ಯಾರ್ಥಿಗಳ ಭರ್ತಿ ಶಾಸಕರ ನೇತೃತ್ವದ ಸಮಿತಿಯಲ್ಲಾಗುತ್ತಿತ್ತು. ಈಗ ಆನ್‌ಲೈನ್ ವ್ಯವಸ್ಥೆ ಮಾಡಿದ್ದು, ಹಲವು ಸಮಸ್ಯೆಯಾಗುತ್ತಿದೆ.ಅದನ್ನು ಬಗೆಹರಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಹುದ್ದೆ ಖಾಲಿಯಾಗಿ ಹಲವು ತಿಂಗಳಾದರೂ ನೇಮಕಾತಿ ನಡೆಯುತ್ತಿಲ್ಲ. ಅದನ್ನು ಸರಿಮಾಡಬೇಕು ಎಂದರು. ಅದಕ್ಕೆ ಉತ್ತರಿಸಿದ ಸಚಿವ ಮಂಕಾಳ ವೈದ್ಯ, ಈ ಹಿಂದೆ ಸರಿ ಇದ್ದ ವ್ಯವಸ್ಥೆಗಳು ಐದು ವರ್ಷದಲ್ಲಿ ಹಾಳಾದವು. ನೀವು ಮಾಡಿದ ಅವ್ಯವಸ್ಥೆಯನ್ನು ನಾವು ಈಗ ಸರಿ ಮಾಡುತ್ತಿದ್ದೇವೆ ಎಂದು ಟಾಂಗ್ ನೀಡಿದರು. ಸರ್ಕಾರದ ಬಳಿ ಹಣವಿದೆ.
ಹೆಸ್ಕಾಂ ಲೈನ್‌ಮೆನ್ ಉಳಿಯುತ್ತಿಲ್ಲ
ಹೆಸ್ಕಾಂನಲ್ಲಿ ಜಿಲ್ಲೆಗೆ ನೇಮಕವಾಗುವ ಹೊರ ಜಿಲ್ಲೆಗಳ ಲೈನ್‌ಮೆನ್‌ಗಳು ಕೆಲ ವರ್ಷದ ಬಳಿಕ ರಾಜಕಾರಣಿಗಳ ಶಿಫಾರಸು ಪಡೆದು, ತಮ್ಮ ಊರುಗಳಿಗೆ ತೆರಳುತ್ತಾರೆ. ಇದರಿಂದ ನಮ್ಮಲ್ಲಿ ಹುದ್ದೆಗಳು ಕಾಲಿಯಾಗೇ ಉಳಿಯುತ್ತಿವೆ ಈ ಕುರಿತು ಗಮನ ಹರಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದರು.
ಡ್ರಾಮಾ ಅಲ್ಲ ಡಾಮಾ
ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜ್ ಬೋಧಕ ಆಸ್ಪತ್ರೆ ಕ್ರಿಮ್ಸ್ನಲ್ಲಿ ವರ್ಷಕ್ಕೆ ಎಷ್ಟು ರೋಗಿಗಳು ದಾಖಲಾಗಿದ್ದಾರೆ. ಅವರಲ್ಲಿ ಎಷ್ಟು ಜನರನ್ನು ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ವೈದ್ಯಕೀಯ ಅಽÃಕ್ಷಕ ಡಾ.ಶಿವಾನಂದ ಕುಡ್ತಲಕರ್, ವಾರ್ಷಿಕ ಸುಮಾರು 1 ಲಕ್ಷಕ್ಕೂ ಅಽಕ ರೋಗಿಗಳು ದಾಖಲಾಗುತ್ತಿದ್ದಾರೆ. ತಿಂಗಳಿಗೆ 60 ರೋಗಿಗಳು ಡಾಮಾ' ಮಾಡಿಕೊಂಡು ಬೇರೆ ಆಸ್ಪತ್ರೆಗಳಿಗೆ ಹೋಗುತ್ತಾರೆ ಎಂದು ಸಚಿವ ಅದನ್ನುಡ್ರಾಮಾ' ಎಂದು ಅರ್ಥೈಸಿಕೊಂಡ ಸಚಿವ ವೈದ್ಯ ಕುಡ್ತಲಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಕುಡ್ತಲಕರ್ ಅದು ಡ್ರಾಮಾ ಅಲ್ಲ, `ಡಿಶ್ಚಾರ್ಜ್ ಅಗೇನಸ್ಟ್ ಮೆಡಿಕಲ್ ಅಡ್ವೆ÷Êಸ್ ಎಂದು ಸ್ಪಷ್ಟಪಸಿದರು.
ಸರ್ಕಾರದಲ್ಲಿ ಹಣ ಇದೆ. ವಿರೋಧ ಪಕ್ಷಗಳು, ಜನರು ಹೇಳುವಂತೆ ಸರ್ಕಾರ ದಿವಾಳಿಯಾಗಿಲ್ಲ. ಅಗತ್ಯ ಸಂದರ್ಭಗಳಲ್ಲಿ ಅಗತ್ಯ ಯೋಜನೆ ಮಂಜೂರು ಮಾಡಲಿದ್ದೇವೆ. ಎಲ್ಲ ಗ್ಯಾರಂಟಿಗಳನ್ನು ಮಂಜೂರು ಮಾಡುತ್ತೇವೆ. ಹಿಂದಿನ ಸರ್ಕಾರ ಮಾಡಿದ ಸಾಲ ತೀರಿಸುವ ಜತೆಗೆ ಹೊಸ ಕಾಮಗಾರಿಗಳನ್ನೂ ಮಾಡುತ್ತಿದ್ದೇವೆ. ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ