371(ಜೆ) ರದ್ಧತಿ ಕೋರಿ ಪತ್ರ ಸಲ್ಲ

k.virupakshappa
Published on

ಸಿಂಧನೂರು: ಹೈದರಾಬಾದ್ ಕರ್ನಾಟಕ ಭಾಗಕ್ಕೆ ನೀಡಲಾಗಿರುವ 371(ಜೆ) ಕಲಂ ಮೀಸಲಾತಿ ರದ್ದತಿ ಮಾಡಬೇಕೆಂದು ಸಚಿವ ಎಚ್.ಕೆ.ಪಾಟೀಲ್ ಸಿಎಂಗೆ ಪತ್ರ ಬರೆದಿರುವ ಮಾಹಿತಿ ಇದ್ದು, ಇದು ಸರಿಯಾದ ಕ್ರಮವಲ್ಲ. ಇದರಿಂದ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ದೂರಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ಈಗಿನ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವೈಜನಾಥ ಪಾಟೀಲ್ ನೇತೃತ್ವದ ಹೋರಾಟದ ಫಲವಾಗಿ 371(ಜೆ) ಕಲಂ ಜಾರಿಯಾಗಿದೆ.

ಹುದ್ದೆಗಳ ಆಯ್ಕೆಯಲ್ಲಿ ಶೇ.80ರಷ್ಟು ಕಲ್ಯಾಣ ಕರ್ನಾಟಕಕ್ಕೆ, ಉಳಿದ ಶೇ.20ರಷ್ಟು ಬೇರೆ ಜಿಲ್ಲೆಗಳಿಗೆ ಆದ್ಯತೆ ನೀಡಬೇಕೆಂದಿದ್ದು, ಕಲ್ಯಾಣ ಕರ್ನಾಟಕ ಹೊರೆತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ಶೇ.8 ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿದೆ.

ಇದರಿಂದ ಕಲ್ಯಾಣ ಕರ್ನಾಟಕದ ಅನೇಕರು ವಿವಿಧ ಹುದ್ದೆಗಳನ್ನು ಪಡೆದಿದ್ದಾರೆ. ಬಿಟ್ರಿಷರ ಕಾಲದಲ್ಲಿಯೇ ಮಹಾರಾಷ್ಟ್ರ, ಆಂಧ್ರ ಸೇರಿ ಕೆಲವು ಜಿಲ್ಲೆಗಳಲ್ಲಿ ಮೀಸಲಾತಿ ಇತ್ತು. ಕರ್ನಾಟಕ ಏಕೀಕರಣಗೊಂಡ ನಂತರ ಆಗಿನ ಸರ್ಕಾರ ಸೌಲಭ್ಯ ತೆಗೆದು ಹಾಕಿತ್ತು.

2012ರಲ್ಲಿ 371(ಜೆ) ಕಲಂ ಜಾರಿಯಾದ ನಂತರ ಈ ಭಾಗಕ್ಕೆ ಸೌಲತ್ತು ಸಿಗುತ್ತಿವೆ. ಶೇ.8 ರಷ್ಟು ಮೀಸಲಾತಿ ವಿಚಾರವಾಗಿ ಸಚಿವ ಎಚ್.ಕೆ.ಪಾಟೀಲ್ ಸಿಎಂಗೆ ಪತ್ರ ಬರೆದಿರುವುದು ಸಮಂಜಸವಲ್ಲ. ಇದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನ್ಯಾಯವಾಗಲಿದೆ.

ರಾಜ್ಯ ಸರ್ಕಾರ ಹೈದ್ರಾಬಾದ್ ಕರ್ನಾಟಕ ಭಾಗದ 371(ಜೆ) ಕಲಂ ಜಾರಿ ಪರವಾಗಿ ನಿಲ್ಲಬೇಕು ಎಂದು ತಿಳಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ನಗರಸಭೆ ಸದಸ್ಯ ಸತ್ಯನಾರಾಯಣ ದಾಸರಿ, ವೆಂಕೋಬಣ್ಣ ಕಲ್ಲೂರು, ಮುತ್ತು ಬರಸಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net