ಹೊಸದಾಗಿ ಜಾರಿಗೊಳಿಸಿದ ಪ್ರವೇಶ ಪರೀಕ್ಷೆ ರದ್ದುಗೊಳಿಸಿ

WEB LOGO
Published on

ವಿಜಯಪುರ:  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ನೇಮಕಾತಿಗಾಗಿ ಹೊಸದಾಗಿ ಜಾರಿಗೆ ತಂದಿರುವ ಪ್ರವೇಶ ಪರೀೆ ಮಾನದಂಡ ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಮಾದಿಗರ ಸಂದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಂದ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ ಮಾತನಾಡಿ, ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ನೇಮಕಾತಿಗಾಗಿ ನಡೆಸುವ ಪ್ರವೇಶ ಪರೀೆ ನಿಯಮವನ್ನು ಸಂಪೂರ್ಣ ರದ್ದುಗೊಳಿಸಬೇಕು.

ಹಿಂದೆ ಕಾರ್ಯನಿರ್ವಹಿಸಿದ ಅತಿಥಿ ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಅವರ ಶ್ರಮಕ್ಕೆ ಬೆಲೆ ಕೊಟ್ಟು, ಈ ವರ್ಷವೂ ಅವರನ್ನೇ ಮುಂದುವರಿಸಬೇಕು. ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಸರ್ಕಾರದ ನೇಮಕಾತಿಯಲ್ಲಿ ಅನ್ವಯವಾಗುವಂತೆ ಪ್ರತಿವರ್ಷ ಅಂದಾಜು 25 ರ ವರೆಗೆ ಕೃಪಾಂಕಗಳನ್ನು ನೀಡಬೇಕು. ಅಲ್ಲದೆ, ಅವರಿಗೆ ಸೇವಾ ಭದ್ರತೆ ಒದಗಿಸುವ ಮೂಲಕ ಕನಿಷ್ಠ ವೇತನ ಕಾಯ್ದೆಯಡಿ ಮಾಸಿಕ 35 ಸಾವಿರ ರೂಗಳ ಗೌರವ ಧನ ನೀಡುವಂತೆ ಆಗ್ರಹಿಸಿದರು.

ಶಾಂತಕುಮಾರ ಭಾವಿಕಟ್ಟಿ ಮಾತನಾಡಿ, ಮಹಿಳಾ ಶಿಕ್ಷಕಿ/ಉಪನ್ಯಾಸಕಿಯರಿಗೆ ಪ್ರಸೂತಿ ರಜೆಯ ಜತೆಗೆ ವೇತನ ಒದಗಿಸಬೇಕು. ವರ್ಷದ 12 ತಿಂಗಳು ವೇತನ ಪಾವತಿಸಬೇಕು. ಪ್ರತಿಯೊಬ್ಬರಿಗೂ ಜೀವವಿಮಾ ಸೌಲಭ್ಯ ಒದಗಿಸುವುದು ಸೇರಿ ಮತ್ತಿತರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.

ಒಂದು ವೇಳೆ ಪರೀಾ ಕ್ರಮ ರದ್ದು ಮಾಡದಿದ್ದರೆ ಕುಟುಂಬ ಸಮೇತ ಇಲಾಖೆ ಮುಂದೆ ನಿರಂತರ ಉಪವಾಸ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಛತ್ರಪ್ಪ ಬಜಂತ್ರಿ, ವಿಕ್ರಮ ಮುದ್ದೇಬಿಹಾಳ, ಸಾಬಣ್ಣ ಬಸರಕೋಡ, ಶಿವರಾಜ ಮಾಲಗತ್ತಿ, ಕುರಿಸಿದ್ದ ಬಾನು ಹೆಬ್ಬಾಳ, ಅಸ್ಮಾ ಬಾಗವಾನ, ಸಿ. ಮಹಾಂತೇಶ, ಸಿದ್ದಾರ್ಥ ಲಚ್ಯಾಣ, ಸುರೇಶ ವಾಲಿಕಾರ, ಮಹಾಂತೇಶ ಸಲಬಣ್ಣವರ, ಜಿ.ಡಿ. ಬೀಳಗಿ, ವಿ.ಬಿ. ನಾಯಕ, ಸಂಜು ಬನಸೋಡೆ, ಬಸವರಜ ಜಂಬಗಿ, ಜಬ್ಬಾರ ಕವಠೆ, ಭೀಮಾಶಂಕರ ಸರವಾಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net