ವಿಶ್ವ ಆತ್ಮಹತ್ಯೆ ತಡೆ ಜಾಗೃತಿಗಾಗಿ ಅರಿವಿನ ನಡಿಗೆ

cccccc
Published on



ಮಂಗಳೂರು : ಆತ್ಮಹತ್ಯೆಗೆ ಯೋಚಿಸುವುದು ಆರೋಗ್ಯಪೂರ್ಣ ವ್ಯಕ್ತಿತ್ವದ ಲಕ್ಷಣವಲ್ಲ. ಸುವಿಚಾರ ಹಾಗೂ ಕ್ರಿಯಾಶೀಲ ಬದುಕು ನಮ್ಮದಾಗಬೇಕು. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಕೆನರಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ .ಪದ್ಮನಾಭ ಪೈ ಹೇಳಿದರು.
ಕೆನರಾ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಮಾವೇಶಗೊಂಡ ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಆಯೋಜಿಸಿದ ಜಾಥವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೆನರಾ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ, ಪದವಿ ಕಾಲೇಜುಗಳ ಆವರಣದಿಂದ ಹೊರಟ ಜಾಥಾ ನಗರದ ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ , ನವ ಭಾರತ ವೃತ್ತ, ಬಂಟ್ಸ್ ಹಾಸ್ಟೆಲ್ ವೃತ್ತ, ಮಹಾತ್ಮ ಗಾಂಧಿ ರಸ್ತೆಯಾಗಿ ಕೆನರಾ ಪದವಿಕಾಲೇಜು ಆವರಣದಲ್ಲಿ ಸಮಾಪನಗೊಂಡಿತು.
ಕೆನರಾ ಹೈಸ್ಕೂಲ್ ಸಿಬಿಎಸ್ ಇಲ್ಲಿಯ ಆಪ್ತ ಸಮಾಲೋಚಕಿ ಮಮತಾ ಭಂಡಾರಿ ಆತ್ಮಹತ್ಯೆ ತಡೆ ದಿನದ ಮಹತ್ವದ ಕುರಿತು ಮಾತನಾಡಿದರು. ಕೆನರಾ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಮಾನಸಿಕ ಒತ್ತಡಗಳು, ನಿರುದ್ಯೋಗ, ವರದಕ್ಷಿಣೆ ಪ್ರಚೋದಿತ ಆತ್ಮಹತ್ಯೆ ಇವುಗಳ ಕಾರಣಗಳು ಮತ್ತು ಪರಿಹಾರ ಕ್ರಮಗಳ ಕುರಿತು ಬೀದಿ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net