

ಚಿತ್ರದುರ್ಗ: ಕೆನರಾ ಬ್ಯಾಂಕ್ ನಿಂದ ಇಂದು ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಡಿಸಿ ಆರ್ ವಿನೋತ್ ಪ್ರಿಯಾ ಉದ್ಘಾಟಿಸಿದರು.
ಬ್ಯಾಂಕ್ ಸಿಎಸ್ ಆರ್ ಯೋಜನೆಯಡಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ದ ವಿದ್ಯಾರ್ಥಿ ನಿಯರಿಗೆ ವೇತನ ವಿತರಿಸಲಾಯಿತು.
ಲೀಡ್ ಬ್ಯಾಂಕ್ ಮ್ಯಾನೇಜರ್ ನಿಂಗೇಗೌಡ, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಹಿರಿಯ ಬ್ಯಾಂಕ್ ಅಧಿಕಾರಿಗಳಿದ್ದರು.
ಈ ವೇಳೆ ಮಾತನಾಡಿದ ಡಿಸಿ ವಿನೋತ್ ಪ್ರಿಯಾ ಮಾತನಾಡಿ, ಸಿಎಸ್ ಆರ್ , ಇದು ಡಬಲ್ ಪ್ರೋಗಾಂ ಆಗುತ್ತದೆ. ಆದ್ದರಿಂದ ಜಿಲ್ಲೆಗೆ ಏನು ಬೇಕು ಎಂಬುದನ್ನು ಅರಿತು ಚರ್ಚಿಸಿ ಫಂಡ್ ಬಳಸಿದರೆ ಉತ್ತಮ.
ವಿದ್ಯಾರ್ಥಿ ವೇತನ ಕ್ಕಿಂತ ಶಾಲಾ ಕಟ್ಟಡ, ನೊಂದವರಿಗೆ ನೆರವು, ಉತ್ತಮ ಅಂಕಗಳಿಕೆಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದರು.