

ವಿಜಯವಾಣಿ ಸುದ್ದಿಜಾಲ ಉಡುಪಿ
ಮೆರಾಥಾನ್ನಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ದೇಹ ಹಾಗೂ ಆರೋಗ್ಯ ಲಭಿಸುತ್ತದೆ. ನನಗೆ ತಿಳಿದಂತೆ ಮಣಿಪಾಲವು ದೇಶದಲ್ಲೇ ಹೆಚ್ಚು ಓಟಗಾರರಿರುವ ಕೇಂದ್ರವಾಗಿದೆ. ಆಗಸ್ಟ್ 15ರಂದು ನಡೆಯುವ ಕೆನರಾ ಮೆರಾಥಾನ್ ಕಾರ್ಯಕ್ರಮವು ಮಣಿಪಾಲ ಮೆರಾಥಾನ್ ಎಂದು ಖ್ಯಾತಿ ಪಡೆಯುವಂತಾಗಲಿ ಎಂದು ಕೆಎಂಸಿಯ ನ್ಯೂರೋಲಾಜಿ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಆರ್. ಮೆನನ್ ಆಶಯ ವ್ಯಕ್ತಪಡಿಸಿದರು.
ಮಣಿಪಾಲದ ಕೆನರಾ ಇನ್ಸ್ಟಿಟ್ಯೂಟ್ ಆ್ ಮೆನೇಜ್ಮೆಂಟ್ನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ನ 119ನೇ ಸ್ಥಾಪಕ ದಿನಾಚರಣೆ ಹಿನ್ನೆಲೆಯಲ್ಲಿ ಆ.15ರಂದು ಆಯೋಜಿಸಿರುವ ಕೆನರಾ ಮೆರಾಥಾನ್-2024 ಅನಾವರಣ ಮತ್ತು ರಕ್ತದಾನ ಶಿಬಿರ ಸಭೆಯಲ್ಲಿ ಮಾತನಾಡಿದರು.
2014ರಲ್ಲಿ ಮಣಿಪಾಲದ ಅಥ್ಲೀಟ್ಗಳೊಂದಿಗೆ ಸಣ್ಣ ಪ್ರಮಾಣದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದೆವು. ನಂತರ ವಿಶ್ವವಿದ್ಯಾನಿಲಯದೊಂದಿಗೆ, ಸಿಂಡಿಕೇಟ್ ಬ್ಯಾಂಕ್ನೊಂದಿಗೆ ಮೆರಾಥಾನ್ ಆರಂಭಿಸಿದವು. ಬಳಿಕ ಸಾಧ್ಯವಾಗಿರಲಿಲ್ಲ. ಮುಂದೆ ನಡೆಯಲಿರುವ ಈ ಕಾರ್ಯಕ್ರಮ ಯಶ ಕಾಣಲಿ ಎಂದು ಶುಭ ಹಾರೈಸಿದರು.
ಡಾ.ದೀಪಕ್ ರಾಮ್ ಬಾಯರಿ ಮಾತನಾಡಿ, ನಮ್ಮ ಸಂಸ್ಥೆಯು ಮಣಿಪಾಲ ಎಂಡ್ ಪಾಯಿಂಟ್ನಲ್ಲಿ ಕೆನರಾ ಬ್ಯಾಂಕ್ನೊಂದಿಗೆ ಯಶಸ್ವಿಯಾಗಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದೆವು. ಮುಂದಿನ ದಿನಗಳಲ್ಲಿ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದರು.
ಸರ್ಕ್ಲ್ ಆಫೀಸ್ ಮಣಿಪಾಲದ ಸಿಜಿಎಂ ಜಯಪ್ರಕಾಶ್, ಜಿಟಿಪಿಸಿ ಮಣಿಪಾಲದ ಜಿಎಂ ಆರ್.ಕೃಷ್ಣಪ್ರಸಾದ್, ಡಿಜಿಎಂ ಜಿಟಿಪಿಸಿ ಉಪಸ್ಥಿತರಿದ್ದರು. ಕೆನರಾ ಮೆರಾಥಾನ್- 2024ರ ಕುರಿತು ಸಚಿನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೂರಜ್ ಉಪ್ಪೂರು, ವಿಶಾಲ್ ಸಿಂಗ್, ದುರ್ಗಾ ಪ್ರಸಾದ್, ರಿಯಾಜ್, ನರಸಿಂಹ ಮೂರ್ತಿ, ನಿಲೇಶ್ ಗಾಯಿಕ್ವಾಡ್ ಸಂಘಟಿಸಿದರು. ಶಿವಾನಿ ಎಂ. ಕಾರ್ಯಕ್ರಮ ನಿರೂಪಿಸಿದರು.
ಕೆನರಾ ಬ್ಯಾಂಕ್ ಆಫೀಸರರ್ಸ್ ಅಸೋಸಿಯೇಷನ್ ಅತ್ಯುತ್ತಮ ಸಂಘಟನೆಯಾಗಿದೆ. 3ನೇ ಬಾರಿ ಕೆನರಾ ಮೆರಾಥಾನ್ ಆಯೋಜಿಸಿದ್ದು ಮಾದರಿಯಾಗಿದೆ. ನಾವು ದೈಹಿಕ ಸದೃಢರಾಗಿದ್ದರೆ ಮಾತ್ರ ಮಾನಸಿಕವಾಗಿಯೂ ದೀರ್ಘ ಕಾಲ ಆರೋಗ್ಯವಾಗಿ ಬದುಕಲು ಸಾಧ್ಯ. ಶ್ರೀನಾಥ್ ಜೋಶಿ.ಜನರಲ್ ಮೆನೇಜರ್. ಸಿಐಬಿಎಂ, ಮಣಿಪಾಲ