ಅ.5,6 ರಂದು ಕೆನರಾ ಲಿಟರಾಟಿ ಸಾಹಿತ್ಯೋತ್ಸವ 2024

Published on

ಮಂಗಳೂರು: ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ‘ಕೆನರಾ ಲಿಟರಾಟಿ ಸಾಹಿತ್ಯೋತ್ಸವ 2024’ನ್ನು ಕೊಡಿಯಾಲ್ ಬೈಲ್‌ನ ಟಿ.ವಿ. ರಮಣ್ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಅ. 5 ಮತ್ತು 6ರಂದು ಆಯೋಜಿಸಲಾಗಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಷನ್‌ನ ಕಾರ್ಯದರ್ಶಿ ರಂಗನಾಥ ಭಟ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅ.5ರಂದು ಬೆಳಗ್ಗೆ 10ಕ್ಕೆ ಉದ್ಘಾಟನೆ ನಡೆಯಲಿದ್ದು ಶಾಸಕ ವೇದವ್ಯಾಸ್ ಕಾಮತ್, ಎಂಆರ್‌ಪಿಎಲ್‌ನ ಮಹಾ ಪ್ರಬಂಧಕ ಡಾ.ರುಡಾಲ್ ನೊರೊನ್ಹಾ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. 15 ವರ್ಷದ ಮಕ್ಕಳಲ್ಲಿ ಸಾಹಿತ್ಯದ ಪ್ರೀತಿ ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಕೆನರಾ ನಂದಗೋಕುಲದ ನಿರ್ದೇಶಕಿ ಅಂಜನಾ ಕಾಮತ್ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೃಜನಶೀಲ ಬರಹ ಕಾರ್ಯಾಗಾರದಲ್ಲಿ ಸುನಿತಾ ಪಿರೇರಾ ಮತ್ತು ಬೆನ್ಸಿಟಾ ರೋಶಲ್ ಭಾಗವಹಿಸಲಿದ್ದಾರೆ. ರೂಪಶ್ರೀ ಶೆಣೈ ಅವರಿಂದ ಕವಿತಾ ಕಾರ್ಯಾಗಾರ, ವಿಕ್ರಮ್ ಶ್ರೀಧರ್ ಅವರಿಂದ ಕಥೆ, ಶ್ರೀದೇವಿ ಸುನಿಲ್ ಅವರ ಕಟ್ಟುಕಥೆ ಹೇಳುವಿಕೆ, ಮಕ್ಕಳ ಲೇಖಕಿ ರೂಪಾ ಪೈ ಅವರ ಇತ್ತೀಚಿನ ಕೃತಿಗಳ ಪರಿಚಯ, ಅಮರ್ ಚಿತ್ರ ಕಥಾ ತಂಡದ ವಿನೀತ್ ನಾಯಕ್ ಹಾಗೂ ರೆಬೆಕ್ಕಾ ಸಾರಾ ಜೋಸ್ ಅವರಿಂದ ವಿಶೇಷ ಅವೇಶನ ನಡೆಯಲಿದೆ ಎಂದರು.

ಎಲ್‌ಕೆಜಿಯಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಈಗಾಗಲೇ ಸುಮಾರು 600 ಮಂದಿ ನೋಂದಾಯಿಸಿಕೊಂಡಿದ್ದು, ಹೆಚ್ಚಿನ ವಿವರಗಳಿಗಾಗಿ ್ಚಚ್ಞ್ಝಜಿಠಿಛ್ಟಿಠಿಜಿಃ್ಚಚ್ಞಚ್ಟ.ಚ್ಚ.ಜ್ಞಿ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

ಸಂಸ್ಥೆಯ ಪಿಆರ್‌ಒ ಉಜ್ವಲ್ ಮಲ್ಯ, ಶಿಕ್ಷಕಿಯರಾದ ಅಪರ್ಣ ಕಾಮತ್, ಅನುಪಮ ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net