

ಮಂಗಳೂರು : ವಿಕಸಿತವಾಗುತ್ತಿರುವ ಭಾರತದಲ್ಲಿ ಕೈಗಾರಿಕೆ ಸಹಿತ ಖಾಸಗಿ ಉತ್ಪಾದನಾ ರಂಗದಲ್ಲಿ ವಿಪುಲ ಅವಕಾಶಗಳು ಸೃಷ್ಟಿಯಾಗುತ್ತಿವೆ. ಜಾಗತಿಕ ಉದ್ಯೋಗಾವಕಾಶಗಳಿಗೆ ಹಾತೊರೆಯುವ ಸ್ಥಿತಿ ಬದಲಾಗಿ ವಿದೇಶಿ ಉದ್ಯಮಗಳು ಭಾರತದಲ್ಲಿ ಅವಕಾಶಗಳಿಗಾಗಿ ಹಾತೊರೆಯುತ್ತಿದ್ಧಾರೆ ಎಂದು ಟಾಟಾ ಪ್ರಾಜೆಕ್ಟ್‌ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ಪೈ ಹೇಳಿದರು. ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅತ್ಯಾಧುನಿಕ ಲ್ಯಾಬ್ಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವತ್ತ ಧಾವಿಸುತ್ತಿದ್ದು ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಏಷ್ಯಾ ಎಟ್ ವರ್ಲಿ ಅಧ್ಯಕ್ಷ ದಿನೇಶ್ ಪಿಸುರ್ಲೇಂಕರ್ ಮಾತನಾಡಿ ಭಾರತೀಯ ಯುವ ಸಂಪನ್ಮೂಲಕ್ಕೆ ಜಾಗತಿಕ ಬೇಡಿಕೆ ಸೃಷ್ಟಿಯಾಗುತ್ತಿದೆ ಎಂದರು
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ವಾಸುದೇವ ಕಾಮತ್, ಸದಸ್ಯ ಬಸ್ತಿ ಪುರುಷೋತ್ತಮ ಶೆಣೈ, ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಶ್.ಎಚ್.ಆರ್. ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಕೌನ್ಸಿಲ್ ಸಂಚಾಲಕ ಪ್ರದೀಪ್.ಜಿ. ಪೈ ಸ್ವಾಗತಿಸಿ ಆಡಳಿತ ಮಂಡಳಿಯ ಸಹ ಕೋಶಾಧಿಕಾರಿ ಎಂ. ಜಗನ್ನಾಥ ಕಾಮತ್ ವಂದಿಸಿದರು.ಸಹಪ್ರಾಧ್ಯಾಪಕಿ ಕ್ಯಾರಲ್ ಡಿ.ಮೆಲ್ಲೊ ಕಾರ್ಯಕ್ರಮ ನಿರೂಪಿಸಿದರು.