

ಮಂಗಳೂರು : ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮಂಗಳೂರು ಇದರ ಕೆನರಾ ಪ್ರೌಢ ಶಾಲೆ ಡೊಂಗರಕೇರಿ,ಕೆನರಾ ಪ್ರೌಢ ಶಾಲೆ ಉರ್ವ ಹಾಗೂ ಕೆನರಾ ಸಿಬಿಎಸ್‌ಇ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ನಗರದ ರಮಣ ಪೈ ಸಭಾಭವನದಲ್ಲಿ ಸನ್ಮಾನಿಸಲಾಯಿತು.
ಕೆನರಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ರಂಗನಾಥ ಭಟ್ ಮಾತನಾಡಿ‘ ಸಾಧನೆಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡಬಹುದು. ಆದರೆ ಅದರ ಮೂಲ ಶಿಕ್ಷಣವೇ ಆಗಿದೆ. ಜ್ಞಾನದ ಜತೆ ಕೌಶಲ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ. ಗುಣಾತ್ಮಕ ಶಿಕ್ಷಣಕ್ಕೆ ಕೆನರಾ ಶಿಕ್ಷಣ ಸಂಸ್ಥೆ ಸದಾ ಪ್ರೋತ್ಸಾಹ ನೀಡುತ್ತ ಬಂದಿದೆ ಎಂದರು.
ಕೆನರಾ ಆಡಳಿತ ಮಂಡಳಿ ಉಪ ಖಜಾಂಚಿ ಸುರೇಶ್ ಕಾಮತ್ ಮಾತನಾಡಿ ‘ ಸಾಧಕ ವಿದ್ಯಾರ್ಥಿಗಳ ಸಾಧನೆ ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆ. ದೇಶ ವಿದೇಶಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಕೆನರಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದಾರೆ ಎನ್ನುವುದು ನಮ್ಮ ಹೆಮ್ಮೆ ಎಂದರು.
ಕೆನರಾ ವಿಕಾಸ ಪ.ಪೂ.ಕಾಲೇಜಿನ ಸಂಯೋಜಕ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಪ.ಪೂ.ಕಾಲೇಜಿನ ಸಂಚಾಲಕ ಗೋಪಾಲಕೃಷ್ಣ ಶೆಣೈ, ಉರ್ವ ಕೆನರಾ ಪ್ರೌಢಶಾಲೆ ಸಂಚಾಲಕ ಯೋಗೇಶ್ ಕಾಮತ್, ಕೆನರಾ ಶಿಕ್ಷಣ ಸಂಸ್ಥೆಗಳ ಮುಖ್ಯ ಶಿಕ್ಷಕಿಯರಾದ ಸುರೇಖಾ ಭಟ್, ಇಂದುಮತಿ, ಅರುಣ ಕುಮಾರಿ ಉಪಸ್ಥಿತರಿದ್ದರು. ಸಂಸ್ಥೆಯ ಪಿಆರ್‌ಒ ಉಜ್ವಲ್ ಮಲ್ಯ ಕಾರ್ಯಕ್ರಮ ನಿರೂಪಿಸಿದರು.