

ಬೆಳಗಾವಿ : ಮುಂದಿನ ಸಾವಿರ ದಿನಗಳಲ್ಲಿ ಕೆನರಾ ಬ್ಯಾಂಕಿನ ಮಾರುಕಟ್ಟೆ ಪಾಲನ್ನು ಹೆಚ್ಚಿಸುವುದಕ್ಕಾಗಿ ಎಲ್ಲರೂ ಸಮನ್ವಯ ಕಾಪಾಡಿಕೊಂಡು, ಕೆನರಾ ಬ್ಯಾಂಕಿನ ಸಾಲ ವಿತರಣೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಗ್ರಾಹಕರಿಗೆ ತಲುಪಿಸುವುದರ ಮೂಲಕ ಗುರಿ ತಲುಪಬೇಕು ಎಂದು ಮುಖ್ಯ ಪ್ರಧಾನ ವ್ಯವಸ್ಥಾಪಕ ಸಂದೀಪ ಗವಾರೆ ಹೇಳಿದರು.
ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿಬೆಳಗಾವಿ ಮತ್ತು ಚಿಕ್ಕೋಡಿ ಪ್ರಾದೇಶಿಕ ಕಚೇರಿಗಳ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಟೌನ್‌ಹಾಲ್ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕ್ ನೀಡಿರುವ ಗುರಿಗಳನ್ನು (2023-24 ಹಣಕಾಸು ವರ್ಷದ)ಗ್ರಾಹಕರ ಜತೆ ಉತ್ತಮ ಬಾಂಧವ್ಯಗಳನ್ನು ಹೊಂದುವ ಮೂಲಕ ಬ್ಯಾಂಕಿನ ಬಲವನ್ನು ಹೆಚ್ಚಿಸುವುದಾಗಿ ಆದ್ಯತೆ ನೀಡಬೇಕು ಎಂದರು. ಯಾವ ಯಾವ ಪ್ರದೇಶಗಳಲ್ಲಿ ಬ್ಯಾಂಕಿನ ಸಿಬ್ಬಂದಿ ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂಬುದನ್ನು ಒತ್ತಿ ಹೇಳಿದರು. ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಅತ್ಯಂತ ಪ್ರಬಲವಾಗಿ ಸ್ಪರ್ಧಾತ್ಮಕ ದೃಷ್ಠಿಯಿಂದ ಪೂರ್ಣಗೊಳಿಸುವ ಅವಶ್ಯಕತೆಯಿದೆ ಎಂದರು.
ಸಭೆಯಲ್ಲಿ 300ಕ್ಕೂ ಹೆಚ್ಚು ಕೆನರಾ ಬ್ಯಾಂಕಿನ ಸಿಬ್ಬಂದಿ ಪಾಲ್ಗೊಂಡಿದ್ದರು. ವೃತ್ತ ಮುಖ್ಯಸ್ಥ ಹಾಗೂ ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ ಸ್ವಾಗತಿಸಿದರು. ಉಪಪ್ರಧಾನ ವ್ಯವಸ್ಥಾಪಕ ಟಿ.ಜಿ.ಬೋರಯ್ಯ ವಂದಿಸಿದರು. ಬೆಳಗಾವಿ ಎಜಿಎಂ ಕೆ.ಶಿವರಾಮಕೃಷ್ಣನ್ ಹಾಗೂ ಚಿಕ್ಕೋಡಿ ಎಜಿಎಂ ಸುಂದರರಾಜನ್ ಸೇರಿದಂತೆ ಇತರರಿದ್ದರು.