

ಬೆಳಗಾವಿ: ಕೆನರಾ ಬ್ಯಾಂಕ್ ಬೆಳಗಾವಿ ಪ್ರಾಂಥೀಯ ಕಚೇರಿಯಲ್ಲಿ ಶನಿವಾರ ‘ಸ್ಪೆಷಿಯಲ್ ಕಸ್ಟಮರ್ ಮೀಟ್’ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಬ್ಯಾಂಕ್ ಸೇವೆ ಕುರಿತಂತೆ ಗ್ರಾಹಕರೊಂದಿಗೆ ಬ್ಯಾಂಕ್‌ನ ಅಧಿಕಾರಿಗಳು ಸಂವಾದ ನಡೆಸಿದರು.
ಬ್ಯಾಂಕ್‌ನಿಂದ ಇನ್ನೂ ಉತ್ತಮ ಸೇವೆ ನೀಡುವುದಕ್ಕೆ ಸಲಹೆಗಳನ್ನು ಪಡೆದರು. ಗ್ರಾಹಕರರೊಂದಿಗೆ ಸಂವಾದ ನಡೆಸಿದ ಬ್ಯಾಂಕ್ ಅಧಿಕಾರಿಗಳು, ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಖ್ಯ ಕಚೇರಿಗೆ ಸಲ್ಲಿಸಿ ಗ್ರಾಹಕ ಸ್ನೇಹಿ ಸೇವೆ ನೀಡುವುದಕ್ಕೆ ಕ್ರಮಗಳನ್ನು ಅನುಸರಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಬ್ಯಾಂಕ್ ಹುಬ್ಬಳ್ಳಿ ಸರ್ಕಲ್ ಡಿಜಿಎಂ ಟಿ.ಜಿ. ಬೋರಯ್ಯ ಮಾತನಾಡಿ, ಬ್ಯಾಂಕ್‌ಗಳ ಸೇವೆ ಕುರಿತಂತೆ ಗ್ರಾಹಕರ ಅಪೇಕ್ಷೆಗಳು ಹೆಚ್ಚಾಗಿವೆ. ಅಪೇಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಸಾಗುತ್ತಿದೆ. ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ನೀಡುವುದಕ್ಕೆ ‘ಸ್ಪೆಸಿಯಲ್ ಕಸ್ಟಮರ್ ಮೀಟ್’ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಗ್ರಾಹಕರಿಂದ ಸಲಹೆ, ಅಭಿಪ್ರಾಯ ಸಂಗ್ರಹಿಸಿ ಅನುಷ್ಠಾನಗೊಳಿಸುತ್ತಿದ್ದೇವೆ ಎಂದರು.
ಪಬ್ಲಿಕ್ ಹಾಗೂ ಪ್ರಾವೇಟ್ ಸೆಕ್ಟರ್ ಬ್ಯಾಂಕ್‌ಗಳಲ್ಲೇ ಕೆನರಾ ಬ್ಯಾಂಕ್ ಉತ್ತಮ ಸ್ಥಾನಮಾನ ಹೊಂದಿದೆ. ದೇಶದಲ್ಲಿ ಕೆನರಾ ಬ್ಯಾಂಕ್‌ನ ವಹಿವಾಟು 20.41 ಲಕ್ಷ ಕೋಟಿ ರೂ. ಇದೆ. ಟೆಕ್ನಾಲಜಿ ಅನುಷ್ಠಾನದಲ್ಲಿ ಕೆನರಾ ಬ್ಯಾಂಕ್ ಮಿನಿಸ್ಟ್ರಿ ಆಫ್ ಇಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೆಶನ್ ಟೆಕ್ನಾಲಜಿಯಿಂದ ಫಸ್ಟ್ ರ‌್ಯಾಂಕ್ ಪಡೆದಿದೆ ಎಂದರು. ಕೆನರಾ ಬ್ಯಾಂಕ್‌ನಿಂದ ಏನಾದರೂ ನ್ಯೂನತೆಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ ಹಾಗೂ ಬ್ಯಾಂಕ್‌ನಿಂದ ಉಪಯುಕ್ತ ಕಾರ್ಯಗಳಾಗಿದ್ದರೆ ಅಕ್ಕ-ಪಕ್ಕದವರಿಗೆ ತಿಳಿಸಿ ಎಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್ ಬೆಳಗಾವಿ ಪ್ರಾಂತೀಯ ಎಜಿಎಂ ಕೆ. ಶಿವರಾಮ ಮಾತನಾಡಿ, ಕೆನರಾ ಬ್ಯಾಂಕ್‌ನಿಂದ ‘ಎಐ ಒನ್’ ಮೋಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಟಿಕೆಟ್ ಬುಕ್ಕಿಂಗ್, ರೀಚಾರ್ಚ್, ಹೋಟೆಲ್ ಬುಕ್ಕಿಂಗ್, ಬ್ಯಾಂಕ್ ಸೇರಿ 250 ಬಗೆಯ ಸೌಲಭ್ಯಗಳಿವೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಾರುಕಟ್ಟೆ ವಿಭಾಗದ ಚೈತನ್ಯ ಮಾತನಾಡಿ, ಕೆನರಾ ಬ್ಯಾಂಕ್‌ನಿಂದ ವಿನೂತನ ಸೇವೆಗಳನ್ನು ಆರಂಭಿಸಲಾಗಿದೆ. ಸೆಲೆಕ್ಟ್ ಸೇವಿಂಗ್ (ಜೀವವಿಮೆ ಸಹಿತ), ಎಸ್.ಬಿ. ಸೆಲಕ್ಟ್, ಪಾವರ್ ಪ್ಲಸ್, ಎಸ್.ಬಿ. ಗ್ಯಾಲಕ್ಸಿ, ಎಲೈಟ್ ಕರೆಂಟ್ ಅಕೌಂಟ್, ಡಿಲೈಟ್ ಕರೆಂಟ್ ಅಕೌಂಟ್, ಕೆನರಾ ಪೆನ್ಶನ್ ಅಕೌಂಟ್ ಸೇರಿ ಹಲವು ಸೇವೆಗಳನ್ನು ಗ್ರಾಹಕರಿಗೆ ಪಿಪಿಟಿ ಮೂಲಕ ವಿವರಿಸಿದರು.
ಬೆಳಗಾವಿ ಡಿವಿಜನಲ್ ಮ್ಯಾನೇಜರ್ ಮಹಮ್ಮದ ರಶೀದ್, ಜವಾಹರಲ್ ಜೀನಾ, ಸಂಪನ್ಮೂಲ ವಿಭಾಗದ ಶಿವರಾಜ ಎಂ.ಬಿ.,ಬೆಳಗಾವಿ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ ಕುಲಕರ್ಣಿ ಇತರರಿದ್ದರು.