ಕೆನರಾ ಬ್ಯಾಂಕ್ ನಿಂದ ವಿದ್ಯಾರ್ಥಿವೇತನ ವಿತರಣೆ

IMG-20240817-WA0021.jpg
Published on

ಹುಬ್ಬಳ್ಳಿ: ಕೆನರಾ ಬ್ಯಾಂಕ್ ವತಿಯಿಂದ ಡಾ. ಅಂಬೇಡ್ಕರ್ ವಿದ್ಯಾ ಜ್ಯೋತಿ ಸ್ಕಾಲರ್ ಶಿಪ್ ಯೋಜನೆ ಅಡಿಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಹಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು.

ಸಂಸ್ಥಾಪಕ ಅಮ್ಮೆಂಬಳ ಸುಬ್ಬಾರಾವ್ ಪೈ ಅವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಆರಂಭಿಸಿದ್ದ "ಕೆನರಾ ವಿದ್ಯಾ ಜ್ಯೋತಿ' ಯೋಜನೆಯನ್ನು 78ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇದನ್ನು ಕೆನರಾ ಬ್ಯಾಂಕ್ ಡಾ. ಅಂಬೇಡ್ಕರ್ ವಿದ್ಯಾಜ್ಯೋತಿ ಎಂದು ಮರು ನಾಮಕರಣ ಮಾಡಲಾಗಿದೆ.

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಇದನ್ನು ಆರಂಭಿಸಲಾಗಿದೆ. ಕಳೆದ 11 ವರ್ಷಗಳಲ್ಲಿ 95 ಸಾವಿರ ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ 46 ಕೋಟಿ ಮೊತ್ತದ ವಿದ್ಯಾರ್ಥಿವೇತನ ನೀಡಲಾಗಿದೆ.

ದೇಶಾದ್ಯಂತ ವಿಸ್ತರಣೆಯಾಗಿರುವ ಯೋಜನೆಯಡಿ ಈ ವರ್ಷ 44742 ವಿದ್ಯಾಥಿರ್ಗಳಿಗೆ 18 ಕೋಟಿ ರೂ.ಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯನ್ನು ಎಲ್ಲ ಗ್ರಾಮೀಣ, ಅರೆ-ನಗರ ಮತ್ತು ನಗರ ಶಾಖೆಗಳಿಂದ ಜಾರಿಗೊಳಿಸಲಾಗಿದೆ.

ನಗರದಲ್ಲಿರುವ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವೃತ್ತ ಕಚೇರಿ ಉಪಮಹಾ ಪ್ರಬಂಧಕಿ ವಿಜಯಶ್ರೀ, ಡಾ. ಸಿ. ಕೃಷ್ಣಮೂರ್ತಿ, ಬಿಇಒ ಚನ್ನಪ್ಪಗೌಡ ಅವರು 96 ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಿಸಿದರು.

ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಬರ್ಟ ಡಿಸಿಲ್ವಾ, ಪ್ರಾದೇಶಿಕ ಕಚೇರಿಯ ಸಜಲ್ ಸಮೀರ್, ಇತರರು ಪಾಲ್ಗೊಂಡಿದ್ದರು.

ಧಾರವಾಡದ ರುಡ್ಸೇಟಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವೃತ್ತ ಕಚೇರಿ ಉಪಪ್ರಧಾನ ವ್ಯವಸ್ಥಾಪಕ ಜೆ.ಪಿ. ಪಾಣಿಗ್ರಾಹಿ, ಕಿಮ್ಸ್ ಪ್ರಾಧ್ಯಾಪಕ ಕೆ.ಎಫ್. ಕಮ್ಮಾರ, ಮನೀಶ್ ಕುಮಾರ್, ಪೃಥ್ವಿರಾಜ್ ಇತರರು ಪಾಲ್ಗೊಂಡು 72 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರಮಾಣ ಪತ್ರ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net