

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ಸರ್ವ ಮತ್ತು ಸಹ ಸದಸ್ಯರ ಸಭೆಯನ್ನು ಜೂ. 16ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ, ಕೆನರಾ ಬ್ಯಾಂಕ್ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಉಪ ಮಹಾ ಪ್ರಬಂಧಕ ಸಾಜಲ್ ಸಮೀರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಘದ ಹಿರಿಯ ಸದಸ್ಯ ಕೆ.ಪಿ. ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಮಯದಲ್ಲಿ 75 ವರ್ಷ ಪೂರ್ಣಗೊಳಿಸಿದ ಸದಸ್ಯರನ್ನು ಸನ್ಮಾನಿಸಲಾಗುವುದು.
ಸಂಘದಜೆ.ಎಸ್. ಜಗದೀಶ, ಶಾಶ್ವತ ಸಲಹೆಗಾರ ಕೆ.ಬಿ.ಬಳ್ಳೂರ, ಸದಸ್ಯ ವಿಲಾಸ ಮಹಾಲೆ, ಉದಯ ಮಹಾಲೆ, ಇತರರು ಉಪಸ್ಥಿತರಿರುವರು. ಕೆನರಾ ಬ್ಯಾಂಕ್ ಎಲ್ಲ ನಿವೃತ್ತ ಅಧಿಕಾರಿಗಳು, ಸಹ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಿಶೋರ ಮಾಡಲಗಿ ತಿಳಿಸಿದ್ದಾರೆ.