

ಮಂಗಳೂರು: ಕೆನರಾ ಬ್ಯಾಂಕ್ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿಯಲ್ಲಿ ನಗರದ ಪತ್ರಿಕಾ ವಿತರಕರಿಗೆ ರೈನ್ ಕೋಟ್ ನೀಡುವ ವಿಶೇಷ ಕಾರ್ಯಕ್ರಮ ಕೆನರಾ ಬ್ಯಾಂಕ್‌ನ ವೃತ್ತ ಕಚೇರಿಯಲ್ಲಿ ಶನಿವಾರ ನಡೆಯಿತು.
ಕೆನರಾ ಬ್ಯಾಂಕ್‌ನ ಡಿಜಿಎಂ ಶೈಲೇಂದ್ರನಾಥ್ ಶೀತ್ ಮಾತನಾಡಿ,ಬ್ಯಾಂಕ್ ನ ಮಹಾಪ್ರಭಂದಕ ಮಂಜುನಾಥ್ ಸಿಂಘಯ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪತ್ರಿಕಾ ವಿತರಕರು ಮಳೆ, ಚಳಿ ಬಿಸಿಲು ಲೆಕ್ಕಿಸದೆ ಮುಂಜಾನೆ ಎದ್ದು ಕೆಲಸ ಮಾಡುತ್ತಿದ್ದಾರೆ. ಅಂತಹ ಶ್ರಮ ಜೀವಿಗಳಿಗೆ ಬ್ಯಾಂಕ್ ಸದಾ ಸಹಾಯ ಮಾಡಲಿದೆ ಎಂದು ಹೇಳಿದರು. ಕೆನರಾ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.
ಬ್ಯಾಂಕ್ ಎಜಿಎಂಗಳಾದ ತರುಣ್ ಕುಮಾರ್, ಎಸ್.ಕೆ.ಸಬಲ್, ಸಂಜಯ್ ಕುಮಾರ್ ಸಿಂಗ್, ಮಹೇಶ್ ಪ್ರಕಾಶ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಜಿಎಂ ಮಂಜುನಾಥ್ ಶಿಂಘಾಯ್, ಮಾರ್ಕೆಟಿಂಗ್ ಮ್ಯಾನೇಜರ್ ವಿನೋದ್ ತಹಲ್ಯಾನಿ, ರೇಣುಕಾ ರಾಜ್ ನ್ಯೂಸ್ ಏಜನ್ಸಿ ಮಾಲೀಕ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.