ಮಾಬುಕಳ ಎಟಿಎಂನಿಂದ ಹಣ ಕಳವು

ATM
Published on

ಕೋಟ: ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಬುಕಳ ರಾಷ್ಟ್ರೀಯ ಹೆದ್ದಾರಿ ಸಮೀಪ ಹೆಬ್ಬಾರ್ ಕಾಂಪ್ಲೆಕ್ಸ್‌ನಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಿಂದ 16700 ರೂಪಾಯಿ ಕಳವಾಗಿದೆ.
ಶುಕ್ರವಾರ ಮುಂಜಾನೆ ಕಳವು ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೆನರಾ ಬ್ಯಾಂಕ್ ಹಂಗಾರಕಟ್ಟೆ ಶಾಖೆ ಸಂಬಂಧಿಸಿದ ಈ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇರದಿರುವುದು ಕಳ್ಳರಿಗೆ ಕೃತ್ಯವೆಸಗಲು ಸುಲಭವಾಗಿದೆ. ಸಿಸಿ ಕ್ಯಾಮರಾದ ಕೇಬಲ್‌ಗಳನ್ನು ಕತ್ತರಿಸಿ ಒಳನುಗ್ಗಿದ ಕಳ್ಳರು ಡಿವಿಆರ್ ಹೊತ್ತೊಯ್ದಿದ್ದಾರೆ. ಅಲ್ಲದೆ ಹಣವಿರುವ ಪೆಟ್ಟಿಗೆಗಳನ್ನು ತೆರೆಯುವ ಯತ್ನ ವಿಫಲವಾಗಿದ್ದು, ರಿಜೆಕ್ಟೆಡ್ ಬಾಕ್ಸ್‌ನಲ್ಲಿದ್ದ 16700 ರೂ. ಕೊಂಡೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವು ನಡೆದ ಸ್ಥಳಗಳಿಗೆ ಬೆರಳಚ್ಚು ತಜ್ಞರು ಹಾಗೂ ಉಡುಪಿ ಎಡಿಷನಲ್ ಎಸ್ಪಿ ಕುಮಾರಚಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬ್ರಹ್ಮಾವರ ಸರ್ಕಲ್ ಅನಂತಪದ್ಮನಾಭ, ಎಸ್.ಐ.ಗುರುನಾಥ್ ಬಿ. ಹಾದಿಮನಿ, ಕೋಟ ಕ್ರೈಂ ಎಸ್.ಐ. ಪುಷ್ಪರಾಮ್, ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪಿ. ಡಿವೈಎಸ್ಪಿ ಸುಧಾಕರ್ ನಾಯ್ಕ, ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಮನೋಜ್ ಕಾಮತ್, ಎಜಿಎಂ ಜಗದೀಶ್ ಶೈಣೆ, ಬ್ಯಾಂಕ್ ಮ್ಯಾನೇಜರ್ ಶಿಲ್ಪಾ ಕೆ. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net