ಬಡವರ ಮಕ್ಕಳಿಗೆ ಕಾಲುವೆಗಳೇ ಈಜುಕೊಳ

ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಗ್ರಾಮದ ಹಡವಿ ಆನಂದ ದೇವನಹಳ್ಳಿಗೆ ಹೋಗುವ ಮಾರ್ಗದ ಕಾಲುವೆಯಲ್ಲಿ ಮಕ್ಕಳು ಈಜುತ್ತಿರುವುದು.
ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಗ್ರಾಮದ ಹಡವಿ ಆನಂದ ದೇವನಹಳ್ಳಿಗೆ ಹೋಗುವ ಮಾರ್ಗದ ಕಾಲುವೆಯಲ್ಲಿ ಮಕ್ಕಳು ಈಜುತ್ತಿರುವುದು.
Published on

ಹಗರಿಬೊಮ್ಮನಹಳ್ಳಿ: ತುಂಗಭದ್ರಾ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳು ಗ್ರಾಮೀಣ ಮಕ್ಕಳಿಗೆ ಈಜುಕೊಳಗಳಾಗಿ ಮಾರ್ಪಾಡಾಗಿವೆ.

ಈ ವರ್ಷ ಬೇಸಿಗೆ ಅವಧಿಯಲ್ಲಿ ಎಡ ಮತ್ತು ಬಲದಂಡೆ ಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಹರಿಸಲಾಗುತ್ತಿದೆ. ಇದರಿಂದ ರೈತರಿ ಬೇಸಿಗೆ ಬೆಳೆ ಬಂದಿದೆ. ಜತೆಗೆ ಗ್ರಾಮೀಣ ಮಕ್ಕಳ ಬೇಸಿಗೆಯಲ್ಲಿ ಕಾಲುವೆಗಿಳಿದು ಈಜಿ ಕುಣಿದು ಕುಪ್ಪಳಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಈಜುಕೊಳಗಳಿರುತ್ತವೆ. ಶಾಲಾ-ಕಾಲೇಜು ರಜಾ ಅವಧಿಯಲ್ಲಿ ಈಜುಕೊಳಗಳಲ್ಲಿ ತರಬೇತಿ ಪಡೆಯಲು ಇಂತಿಷ್ಟು ಶುಲ್ಕ ಪಡೆಯಲಾಗುತ್ತದೆ. ಪಾಲಕರು ಮಕ್ಕಳು ಈಜುವುದನ್ನು ನೋಡಿ ಸಂತೋಷಪಡುತ್ತಾರೆ. ಆದರೆ, ಗ್ರಾಮೀಣ ಮಕ್ಕಳಿಗೆ ಬೇಸಿಗೆಯಲ್ಲಿ ಕಾಲುವೆಗಳೇ ಈಜುಕೊಳಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net