ಕಾಲುವೆಗೆ ಉರುಳಿದ ಟೆಂಪೊ ಟ್ರಾವೆಲರ್, ಗುಳೆ ಹೋದವರ ಕರೆತಂದು ವಾಪಾಸ್ ಬೆಂಗಳೂರಿಗೆ ತೆರಳುತ್ತಿದ್ದ ವಾಹನ

Maski Rangapura Near Temple Roll on Canel
Published on

ಮಸ್ಕಿ: ಗುಳೆ ಹೋದವರ ಕರೆತಂದು ವಾಪಾಸ್ ಬೆಂಗಳೂರಿಗೆ ತೆರಳುತ್ತಿದ್ದ ಟೆಂಪೊ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ರಂಗಾಪುರ ಹತ್ತಿರದ ತುಂಗಭದ್ರಾ ಎಡದಂಡೆ ಕಾಲುವೆಯ 54ನೇ ಉಪ ಕಾಲುವೆಗೆ ಬುಧವಾರ ಬಿದ್ದಿದೆ. ಕಾಲುವೆಯಲ್ಲಿ ಈಜಲು ಹೋಗಿದ್ದ ರಾಮಣ್ಣ ಂಬಾತನಿಗೆ ವಾಹನ ತಾಗಿದ್ದರಿಂದ ಬೆನ್ನು ಮೂಳೆಗೆ ಪೆಟ್ಟಾಗಿದೆ. ಯಾವುದೇ ಜೀವ ಹಾನಿಯಾಗಿಲ್ಲ. ದುಡಿಯುವದಕ್ಕಾಗಿ ಬೆಂಗಳೂರಿಗೆ ಗೂಳೆ ಹೋಗಿದ್ದ ಗ್ರಾಮೀಣ ಜನರು ಮರಳಿ ತಮ್ಮ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ. ಮಂಗಳವಾರ ರಾತ್ರಿ ಬೆಂಗಳೂರು ಬಿಟ್ಟು ಬುಧವಾರ ಲಿಂಗಸೂಗೂರಿನಲ್ಲಿ ಜನರನ್ನು ಇಳಿಸಿ ಮರಳಿ ಬೆಂಗಳೂರಿಗೆ ತೆರುಳುವಾಗ ಈ ಘಟನೆ ಜರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net