

ರಾಯಚೂರು: ಕಾಲುವೆಯಲ್ಲಿ ಬಟ್ಟೆ ತೊಳೆಯುವ ವೇಳೆ ತಾಯಿ, ಮಗಳು ಇಬ್ಬರೂ ಕೊಚ್ಚಿಕೊಂಡು ಹೋದ ಘಟನೆ ರಾಯಚೂರು ತಾಲೂಕಿನ ಬಿ.ಯದ್ಲಾಪೂರ ಗ್ರಾಮದಲ್ಲಿ ಭಾನುವಾರ ಜರುಗಿದೆ.
ಸುಜಾತಾ(27) ಹಾಗೂ ಆಕೆಯ ಮಗಳಾದ ಶ್ರಾವಣಿ(10) ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಸುಜಾತಾ ಎಂಬಾಕೆಯ ಶವ ಪತ್ತೆಯಾಗಿದ್ದು, ಬಾಲಕಿ ಶ್ರಾವಣಿ ಪತ್ತೆಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.