ರೈತರ ಅನುಕೂಲಕ್ಕೆ ನಾಲೆಗಳ ಅಭಿವೃದ್ಧಿ

SRP_04-01jpj
ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಬಳಿಯ ಎರಮಣಿ ಪಿಕಪ್ ನಾಲೆ ಅಭಿವೃದ್ಧಿಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ರೂಪಾ, ದೀಪಕ್, ರವಿಶಂಕರ್, ಬಿ.ಎಸ್.ರಮೇಶ್, ಕೂಡಲಕುಪ್ಪೆ ನಾಗೇಂದ್ರ, ಶಂಕರ್ ನಾರಾಯಣ್, ಗೋಪಾಲೇಗೌಡ ಇತರರು ಇದ್ದರು.
Published on

ಶ್ರೀರಂಗಪಟ್ಟಣ: ಕಾವೇರಿ ನೀರಾವರಿ ಅಚ್ಚುಕಟ್ಟು ಪ್ರದೇಶದ ಉಪ ಮತ್ತು ವಿತರಣಾ ನಾಲೆಗಳ ಕಡೆಯ ಭಾಗಕ್ಕೂ ನೀರು ಸರಾಗವಾಗಿ ಹರಿದು ರೈತರ ಕೃಷಿ ಭೂಮಿಗೆ ತಲುಪಲು ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಮಂಗಳವಾರ ಪಾಲಹಳ್ಳಿ, ಕಿರಂಗೂರು, ಕೂಡಲಕುಪ್ಪೆ ವ್ಯಾಪ್ತಿಯಲ್ಲಿ ನಾಲೆಗಳ ಅಭಿವೃದ್ಧಿ ಕಾಮಗಾರಿ ಹಾಗೂ ಗಂಜಾಂನ ಚಂದಗಾಲು ಮತ್ತು ಆಲಗೂಡು ಗ್ರಾಮದಲ್ಲಿ ಟಿ.ಎಂ.ಹೊಸೂರು-ಕೊಡಿಯಾಲ ಗ್ರಾಮಗಳ ಸಂಪರ್ಕ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಿತರಣಾ ನಾಲೆಗಳ ದುರಸ್ತಿಗೆ ಸಾಕಷ್ಟು ಕೂಗು ಕೇಳಿಬಂದಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನವಿ ಮಾಡಿದ ಹಿನ್ನೆಲೆಯಲ್ಲಿ ಅನುದಾನ ನೀಡಿದ್ದಾರೆ. ಇದೀಗ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಪಾಲಹಳ್ಳಿ ಗ್ರಾಮದ ದೇವರಾಯ ನಾಲೆಗೆ 4.98 ಕೋಟಿ ರೂ., ಕಿರಂಗೂರು ಗ್ರಾಮದ ಕುಂಬಾರಗುಂಡಿ ನಾಲೆಗೆ 5 ಕೋಟಿ ರೂ., ಕೂಡಲಕುಪ್ಪೆಯ ಎರಮಣಿ ಪಿಕಪ್ ನಾಲೆಗೆ 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮೂಲ ನಕ್ಷೆಯ ಪ್ರಕಾರ ನಾಲೆ ಹಾಗೂ ಏರಿ ಒತ್ತುವರಿ ತೆರವುಮಾಡಿ ಗುಣಮಟ್ಟದ ಕಾಮಗಾರಿ ಮೂಲಕ ರೈತರ ಅನೂಕೂಲಕ್ಕೆ ನೀಡಲಾಗುವುದು. ಗಂಜಾಂನ ಕಮಲ್ಯ ಬಡಾವಣೆಯ ಚಂದಗಾಲು-ಗುಂಚಿ ರಸ್ತೆಯನ್ನು 2 ಕೋಟಿ ರೂ. ಹಾಗೂ ಅಲಗೂಡು ಗ್ರಾಮದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.ಗ್ರಾಮೀಣ ಜನರ ಅನುಕೂಲಕ್ಕೆ ಮುಖ್ಯ ರಸ್ತೆ ಹಾಗೂ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ದೂರು ರಹಿತ ಗ್ರಾಮಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಕಿರಂಗೂರು ಗ್ರಾಪಂ ಅಧ್ಯಕ್ಷೆ ರೂಪಾ, ಮಾಜಿ ಅಧ್ಯಕ್ಷ ದೀಪಕ್, ಪಾಲಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಎಸ್.ಚಂದ್ರಶೇಖರ್, ಪುರಸಭಾ ಅಧ್ಯಕ್ಷ ಎಂ.ಎಲ್.ದಿನೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನೆಲಮನೆ ಚೆಲುವೇಗೌಡ, ಉಪಾಧ್ಯಕ್ಷ ಬುಡ್ಡೇಗೌಡ, ನಿರ್ದೇಶಕ ಬಿ.ಎಸ್.ವಾಸು, ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್, ಮುಖಂಡರಾದ ಕೂಡಲಕುಪ್ಪೆ ರವಿಶಂಕರ್, ರೈತ ಮುಖಂಡರಾದ ಬಿ.ಎಸ್.ರಮೇಶ್, ಕೂಡಲಕುಪ್ಪೆ ನಾಗೇಂದ್ರ, ಶಂಕರ್ ನಾರಾಯಣ್, ಗೋಪಾಲೇಗೌಡ, ಗಾಡಿ ಶಂಕರ್, ದಸರಗುಪ್ಪೆ ಪುಟ್ಟಪ್ಪ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್, ಎಇಇ ಫಾರೂಕ್ ಅಬು, ಕಿಶೋರ್ ಕುಮಾರ, ತಹಸೀಲ್ದಾರ್ ಪರಶರಾಮ್ ಸತ್ತಿಗೇರಿ, ತಾಪಂ ಇಒ ವೇಣು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net