ರಾಜ್ಯದ ರೈತರಿಗೆ ನ್ಯಾಯ ಸಿಗಲು ಸಾಧ್ಯವೇ?

chandru
Published on

ತುಳಿತಕ್ಕೆ ಒಳಗಾದ ರೈತ ಮುಖಂಡರನ್ನು ಹೊರಗಿಟ್ಟು, ರೈತರಿಗೆ ಅನ್ಯಾಯ ಮಾಡುವವರೇ ಸರ್ವಪಕ್ಷದ ಸಭೆ ನಡೆಸುವುದು ಎಷ್ಟು ಸಮಂಜಸ? ಎಲ್ಲ ಪಕ್ಷಗಳು ನೀರಿನ ವಿಚಾರದಲ್ಲಿ ರೈತರಿಗೆ ವಂಚನೆ ಮಾಡುತ್ತಲೇ ಬಂದಿವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಬುಧವಾರ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅನ್ಯಾಯ ಮಾಡುವವರೇ ಇಂದು ಸಭೆ ನಡೆಸುತ್ತಿದ್ದಾರೆ.

ಇವರಿಂದ ರಾಜ್ಯದ ರೈತರಿಗೆ ನ್ಯಾಯ ಸಿಗಲು ಸಾಧ್ಯವೇ? ರಾಷ್ಟ್ರೀಯ ಜಲ ನೀತಿಗಾಗಿ ಬಹಳ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ರಾಜ್ಯದ ನೆಲ-ಜಲ ವಿಷಯ ಬಂದಾಗ ಒಂದಾಗಿ ಹೋರಾಡುವುದು ರಾಜ್ಯದ ಹಿತರಕ್ಷಣೆಗೆ ಅನುಕೂಲವಾಗುತ್ತದೆ. ಈ ದಿಕ್ಕಿನಲ್ಲಿ ಸರ್ಕಾರ ಯೋಚಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net